Thursday, April 7, 2011

ಬಾದಾಮ್ ಬರ್ಫಿ ಮಾಡುವುದು ಹೇಗೆ?

                                        ಬಾದಾಮ್ ಬರ್ಫಿ ಮಾಡುವುದು ಹೇಗೆ?
ಬಾದಾಮ್ ಬರ್ಫಿ ಮಾಡುವುದನ್ನು ಇವತ್ತು ಟಿ.ವಿ. ಯಲ್ಲಿ ನೋಡಿ ಇಲ್ಲಿ ಬರೆಯುತ್ತಿದ್ದೇನೆ.


ಬೇಕಾಗುವ ಸಾಮಗ್ರಿಗಳು

ಹಾಲು - ೧/೪ ಲೀಟರ್
ಖೋವಾ - ೨೦೦ ಗ್ರಾಂ
m .t.r. ಬಾದಾಮ್ ಪುಡಿ --೨೦೦ ಗ್ರಾಂ
ತುಪ್ಪ -- ೨ ಚಮಚ
ಬಾದಾಮ್ ಮತ್ತು ಗೋಡಂಬಿ ಚೂರುಗಳು --ತುಪ್ಪದಲ್ಲಿ ಕರಿದದ್ದು


ಮಾಡುವ ವಿಧಾನ

ಮೊದಲಿಗೆ ಹಾಲನ್ನು ಕಾಯಲು ಇಡಿ. ಈಗ ಅದಕ್ಕೆ ಖೋವಾ ಸೇರಿಸಿ. ನಂತರ ಅವೆರಡನ್ನು ಸರಿಯಾಗಿ ಬೆರೆಸಿ ಕಾಯಲು ಬಿಡಿ.ಅದು ಸ್ವಲ್ಪ ಗಟ್ಟಿಯಾದ ತಕ್ಷಣ ಅದಕ್ಕೆ ಬಾದಾಮ್ ಪುಡಿ ಬೆರೆಸಿ.ಇದನ್ನು ನಿಧಾನಕ್ಕೆ ತಿರುವುತ್ತಾ  ಇರಿ.ಅದು ತಳ ಬಿಡುವ ಹಂತಕ್ಕೆ ಬಂದಾಗ ಅದಕ್ಕೆ ತುಪ್ಪ ಸೇರಿಸಿ.ನಂತರ ಅದನ್ನು ಪಾತ್ರೆಯಿಂದ ತೆಗೆಯುವ ಮೊದಲು ತುಪ್ಪದಲ್ಲಿ ಕರಿದಿಟ್ಟ ಬಾದಾಮ್ ಮತ್ತು ಗೋಡಂಬಿ ಚೂರುಗಳನ್ನು ಸೇರಿಸಿ.ತಣ್ಣಗಾದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಬಾದಾಮ್ ಬರ್ಫಿ ರೆಡಿ.

No comments:

Post a Comment