ನೈಸರ್ಗಿಕ ವಾಗಿ ಪುರುಷರ ದೇಹದಲ್ಲಿ ಸ್ನಾಯುಗಳ ಪ್ರಮಾಣ ಹೆಚ್ಚು, ಮಹಿಳೆಯರಲ್ಲಿ ಕಡಿಮೆ ಇರುವ ಕಾರಣ metabolism ಮಹಿಳೆಯರಲ್ಲಿ ನಿಧಾನ.
ಮಹಿಳೆಯರಲ್ಲಿ ಮಗು ಹೆರುವ ಸಾಮರ್ಥ್ಯಕ್ಕಾಗಿ ಪ್ರಕೃತಿಯೇ ಮಹಿಳೆಯರ ಸೊಂಟ ಮತ್ತು ತೊಡೆಯ ಭಾಗದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ.
ಮಹಿಳೆಯರ ಮಾಸಿಕ ಋತುಚಕ್ರದಿಂದ ದೇಹದಲ್ಲಿ ನೀರು ಶೇಖರಣೆಯಗುತ್ತದೆ ಮತ್ತು ಸಿಹಿ ತಿನ್ನುವ ಹಂಬಲ ಹೆಚ್ಚು.
ವ್ಯಾಯಾಮ ದ ನಂತರ ಮಹಿಳೆಯರಲ್ಲಿ ಹಸಿವಿನ ಹಾರ್ಮೋನ್ ಬೇಗನೆ ಏರುತ್ತದೆ. ಇದರಿಂದ ಮಹಿಳೆಯರಿಗೆ ಹೆಚ್ಚು ಹಸಿವಾಗುತ್ತದೆ.
ಪುರುಷರಲ್ಲಿ ಕೊಬ್ಬು ಹೊಟ್ಟೆಯ ಭಾಗದಲ್ಲಿ ಶೇಖರವಾಗುತ್ತದೆ ಮತ್ತು ಸುಲಭವಾಗಿ ಕರಗುತ್ತದೆ. ಮಹಿಳೆಯರಲ್ಲಿ ಚರ್ಮದ ಕೆಳಗೆ, ತೊಡೆ ಮತ್ತು ಸೊಂಟದಲ್ಲಿ ಶೇಖರವಾಗುವುದರಿಂದ ಕರಗುವುದು ಕಷ್ಟ.
ಮಹಿಳೆಯರು ಗರ್ಭ ಧರಿಸಿದಾಗ ಮಗುವಿನ ಸುರಕ್ಷತೆಗಾಗಿ ದೇಹ ಕೊಬ್ಬನ್ನು ಸಂಗ್ರಹಣೆ ಮಾಡುತ್ತದೆ. ಇದು ಕರಗುವುದು ನಿಧಾನ.
ಮಹಿಳೆಯರು ಬೇಗನೆ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಕಾರ್ತಿಸೋಲ್ ಹಾರ್ಮೋನ್ ಹೆಚ್ಚಾಗಿ ಕೊಬ್ಬು ಶೇಖರವಾಗುತ್ತದೆ.