Friday, April 4, 2014

ಎಂಥಾ ಸೆಖೆ ಮಾರ್ರೆ !

Since I dont have proper words to use in English language to use for this article, this article I am writing in Kannada.
ಕಳೆದ ೩ ದಿನದಿಂದ ಇಲ್ಲಿ ತುಂಬಾ ಸೆಖೆ. ಎಷ್ಟು ಸೆಖೆ ಎಂದರೆ ಒಂದು ನಿಮಿಷ ಹೊರಗೆ ಹೋದರೆ ಸಾಕು. ಮೈ ಎಲ್ಲಾ ಬೆವರಿನ ಸ್ನಾನ .
ನಾನು ಅದಕ್ಕಾಗಿ ಹೊರಗೆ ಕಾಲಿಡುವುದೇ ಇಲ್ಲ. ( ಇಲ್ಲದಿದ್ದರೂ ನನಗೆ ಹೊರಗೆ ಹೋಗಲು ಆಗುವುದಿಲ್ಲ . ಆ ಮಾತು ಬೇರೆ ! ) . ನಮ್ಮ ಮನೆಯಲ್ಲಿ ಈಗ ದಿನಾ ಜಗಳ . ಯಾಕೆ ಗೊತ್ತುಂಟ ?
ಫ್ಯಾನ್ ಕೆಳಗೆ ಕೂತುಕೊಳ್ಳುವ ಜಾಗಕ್ಕಾಗಿ !
ಟಿ . ವಿ . ನೋಡುವಾಗ ಈ ಜಗಳ ವಿಪರೀತಕ್ಕೆ ಹೋಗುತ್ತದೆ . ಎಲ್ಲರಿಗೂ ಫ್ಯಾನ್ ಕೆಳಗೆ ಆರಾಮವಾಗಿ ಕೂತು ಟಿ . ವಿ . ನೋಡುವ ಆಸೆ.
ಏಕೆಂದರೆ ಟಿ . ವಿ. ಯ ರಿಮೋಟ್ ಕಂಟ್ರೋಲ್ ಸರಿಯಾಗಿ ಆಪರೇಟ್ ಆಗುವುದು ಇದೊಂದೇ ಜಾಗದಿಂದ . ನನ್ನನ್ನು ಎಲ್ಲರೂ ಬದಿಗೊತ್ತುತ್ತಾರೆ .
ಅದಕ್ಕೆ ನಾನು ಮಾಡಿದ್ದೇನು ?

??

??

ಇದು ತುಂಬಾ ಗುಟ್ಟಿನ ವಿಷಯ .
ನಾನು ಟಿ . ವಿ . ಯ ಜಾಗವನ್ನೇ ಚೂರು ಬದಲಿಸಿ ಬಿಟ್ಟೆ .
ತುಂಬಾ ಅಲ್ಲ ಮತ್ತೆ !

ಇವತ್ತು ನಾನು ಆರಾಮವಾಗಿ ಕೂತು ಇಂಡಿಯಾ ಮತ್ತು ಸೌತ್ ಆಫ್ರಿಕ ಕ್ರಿಕೆಟ್ ಮ್ಯಾಚ್ ನೋಡಬಹುದು .


ಕರೆಂಟ್ ಇದ್ದರೆ !