ಇದು ನನ್ನ ತಾಯಿಯ ವಿಧಾನ .
ಬೇಕಾಗುವ ಸಾಮಗ್ರಿಗಳು
ನೀರುಳ್ಳಿ - ಉದ್ದುದ್ದಕ್ಕೆ ಹೆಚ್ಚಿದ್ದು - ೩
ಖಾರದ ಪುಡಿ
ಸಕ್ಕರೆ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು -- ಸಣ್ಣಗೆ ಹೆಚ್ಚಿದ್ದು
ಕಡಲೆ ಹಿಟ್ಟು
ಮಾಡುವ ವಿಧಾನ --
ಒಂದು ಬೌಲ್ ನಲ್ಲಿ ನೀರುಳ್ಳಿ , ಖಾರದ ಪುಡಿ , ಸಕ್ಕರೆ , ಉಪ್ಪು , ಕೊತ್ತಂಬರಿ ಸೊಪ್ಪು ಎಲ್ಲ ಹಾಕಿ ಮಿಕ್ಸ್ ಮಾಡಬೇಕು . ಈ ಮಿಶ್ರಣವನ್ನು ೧೦ - ೧೫ ನಿಮಿಷ ಹಾಗೇ ಬಿಡಬೇಕು . ಏಕೆಂದರೆ ನೀರುಳ್ಳಿ ನೀರು ಬಿಡುತ್ತದೆ . ನಂತರ ಇದಕ್ಕೆ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಬೇಕು . ಪ್ರತ್ಯೇಕ ನೀರು ಹಾಕುವ ಅಗತ್ಯವಿಲ್ಲ .
ನಂತರ ಕಾದ ಎಣ್ಣೆಯಲ್ಲಿ ಮಿಶ್ರಣದಲ್ಲಿ ಅದ್ದಿದ ನೀರುಳ್ಳಿ ತುಂಡುಗಳನ್ನು ಡೀಪ್ ಫ್ರೈ ಮಾಡಬೇಕು .