Tuesday, December 3, 2019

ಬೀರಬಲ್ಲನ ಕಿಚಡಿ , ಅಮಿತಾಭ್ ಬಚ್ಚನ್ ಹೇಳಿದ ಕಥೆ

ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಕೌನ್ ಬನೆಗಾ ಕರೊಡ್ಪತಿ ಕಾರ್ಯಕ್ರಮ ಹೋದ ಗ್ಲ್ಲು ಗಿದಿ. ಅದರಲ್ಲಿ ಒಂದು ಎಪಿಿಸ್ ಹೆೆ ತ್ಮುಗಿದಿಗ್ದೆa .  ಎಪಿಸೋಡ್ ನಲ್ಲಿ ಅಮಿತಾಭ ಬಚ್ಚನ್ ಹೇಳಿದ ಕಥೆ .


ಅಕ್ಬರ್ ತನ್ನ ರಾಜ್ಯದ ಜನತೆಗೆ ಒಂದು ಚಾಲೆಂಜ್ ಇಡುತ್ತಾನೆ . ಚಳಿಗಾಲದ ಸಮಯ . ಯಾರು ಕೊರೆಯುವ ಚಳಿಗೆ ಕೆರೆಯ ನೀರಿನಲ್ಲಿ ಒಂದು ಇಡೀ ರಾತ್ರಿ ನಿಲ್ಲುತ್ತಾರೋ ಅವರಿಗೆ ಬಹುಮಾನ ನೀಡಲಾಗುವುದು .



ಈ ಪ್ರಕಟಣೆ ಕೇಳಿ ಓರ್ವ ಬಡವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಂದೆ ಬರುತ್ತಾನೆ . ಎಲ್ಲರೂ ಆಶ್ಚರ್ಯ ಪಡುವಂತೆ ಕೊರೆಯುವ ಚಳಿಯಲ್ಲಿ ನೀರಿನಲ್ಲಿ ಇಡೀ ರಾತ್ರಿ ನಿಂತೂ ಬಿಡುತ್ತಾನೆ .


ಬಹುಮಾನ ಕೊಡುವ ಸಮಯದಲ್ಲಿ ಅಕ್ಬರ್ ಬಡವನ ಬಳಿ ಇದು ಹೇಗೆ ಸಾಧ್ಯವಾಯಿತು ಎಂದು ಕೇಳುತ್ತಾನೆ . ಮುಗ್ಧ ಬಡವ ದೂರದಲ್ಲಿ ಒಂದು ಬೀದಿದೀಪ ಇತ್ತು . ಅದನ್ನೇ ದಿಟ್ಟಿಸಿ ನೋಡುತ್ತಾ ರಾತ್ರಿ ಕಳೆದೆ ಎಂದು ತಿಳಿಸಿದ .



ಇದನ್ನು ಕೇಳಿದ ಕೂಡಲೇ ಅಕ್ಬರ ನಿನಗೆ ಬೀದಿದೀಪ ದ ಬೆಳಕಿನಿಂದ ಶಾಖ ಸಿಕ್ಕಿದೆ . ಹಾಗಾಗಿ ಕೊರೆಯುವ ಚಳಿಯಲ್ಲೂ ನೀನು ನೀರಿನಲ್ಲಿ ಕಾಲ ಕಳೆದೆ . ಹಾಗಾಗಿ ನಿನಗೆ ಯಾವುದೇ ಬಹುಮಾನ ಸಿಗುವುದಿಲ್ಲ ಎಂದು ತಿಳಿಸಿದ .


ಬಡವನಿಗೆ ಇದನ್ನು ಕೇಳಿ ತುಂಬ ನೋವಾಯಿತು . ತನ್ನ ಪರಿಶ್ರಮಕ್ಕೆ ಇದೇ ಬೆಲೆಯೇ ಎಂದು ನೊಂದುಕೊಂಡ . ಮರು ಮಾತನಾಡದೆ ಅಲ್ಲಿಂದ ಎದ್ದು ಹೊರಟ .


ಬೀರಬಲ್ಲನಿಗೇ  ಇದನ್ನು ಕೇಳಿ ತುಂಬ ವ್ಯಥೆ ಆಯಿತು . ಹೇಗಾದರೂ ಮಾಡಿ ಬಡವನಿಗೆ ನ್ಯಾಯ ಕೊಡಿಸಬೇಕೆಂದು ನಿಶ್ಚಯಿಸಿದ .


ಅದರಂತೆ ತನ್ನ ಮನೆಯಲ್ಲಿ ಛಾವಣಿಯಲ್ಲಿ ಖಿಚಡಿ ತಯಾರಿಸಲು ಅಕ್ಕಿಯನ್ನು ಪಾತ್ರೆಯಲ್ಲಿ ಇಟ್ಟ . ನಂತರ ಕೆಳಗೆ ನೆಲದ ಲ್ಲಿ ಒಲೆಯನ್ನು ಉರಿಸಿದ . ನಂತರ ಅದರ ಮುಂದೆ ಕೈ ಕಟ್ಟಿ ನಿಂತ .


ಅತ್ತ ಅರಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಅಕ್ಬರ ಬೀರಬಲ್ಲ ನ ಅನುಪಸ್ಥಿತಿ ಗಮನಿಸಿದ . ಚಾರರನ್ನು ಕೇಳಲು ಬೀರಬಲ್ಲ ಖಿಚಡಿ ತಯಾರಿಸುತ್ತಿದ್ದಾರೆ ಎಂಬ ಉತ್ತರ ಬಂತು .


ಸಂಜೆ ಆದರೂ ಬೀರಬಲ್ಲ ನ ಸುಳಿವಿಲ್ಲ . ಬೀರಬಲ್ಲ ತಯಾರಿಸುತ್ತಿರುವ ಖಿಚಡಿ ಎಂಥದ್ದು ಎಂಬುದು ನೋಡಲು ಸ್ವತಃ ಅಕ್ಬರ ನೆ ಹೊರಟ .


ಬೀರಬಲ್ಲ ನ ಮನೆಯಲ್ಲಿ ಅಕ್ಬರ್ ನೋಡಿದ್ದೇನೆಂದರೆ ಬೀರಬಲ್ ಒಂದು ಕಡೆ ಒಲೆ ಉರಿಸುತ್ತಿದ್ದಾನೆ . ಛಾವಣಿ ಯಲ್ಲಿ ಅನ್ನದ ಪಾತ್ರೆ ಕಾಣುತ್ತಿದೆ . ಬೀರಬ ಲ್ ತದೇಕ ಚಿತ್ತದಿಂದ ಅದನ್ನೇ ನೋಡುತ್ತಾ ಇದ್ದಾನೆ .

ಅಕ್ಬರ್ ಬೀರಬಲ್ ಬಳಿ ಏನಾಯಿತು ಎಂದು ಕೇಳಲು ಬೀರಬಲ್ ಎಷ್ಟು ಹೊತ್ತಿನಿಂದ ಒಲೆ ಉರಿಸುತ್ತಿದ್ದರೂ ಅಕ್ಕಿ ಬೇಯುತ್ತನೆ ಇಲ್ಲ ಎಂದು ತಿಳಿಸಿದ .

ಅಕ್ಬರ್ ನಗುತ್ತಾ ಅದು ಹೇಗೆ ಸಾಧ್ಯ? ಅಷ್ಟು ದೂರದಲ್ಲಿ ಅಕ್ಕಿ ಪಾತ್ರೆ ಇರುವಾಗ ಅದಕ್ಕೆ ಶಾಖ ಹೇಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದ .

ಆಗ ಬೀರಬಲ್ ತುಂಬಾ ದೂರ ದಲ್ಲಿ ಉರಿಯುತ್ತಿದ್ದ ಬೀದಿದೀಪ ಶಾಖ ಕೊಡಲು ಸಾಧ್ಯ ಎಂದಾದರೆ ಇಷ್ಟು ದೂರದ ನನ್ನ ಖಿಚಡಿ ಯೂ ತಯಾರಾ ಗಲೇ ಬೇಕು ಎಂದು ತಿಳಿಸಿದ .


ಅಕ್ಬರನಿಗೆ ಬೀರಬಲ್ ಏನು ಹೇಳ ಹೊರಟಿದ್ದಾನೆ ಎಂದು ತಿಳಿಯಿತು . ಕೂಡಲೇ ಅಕ್ಬರ ಬಡವನ ಬಳಿ ಕ್ಷಮೆ ಕೇಳಿ ಅವನಿಗೆ ಬಹುಮಾನ ಇತ್ತು ಸನ್ಮಾನಿಸಿ ಗೌರವಿಸಲಾಯಿತು .










No comments:

Post a Comment