Wednesday, September 22, 2021

ಉಡುಪಿ ಕನ್ನಡದ ವೈಶಿಷ್ಟ್ಯ

 ನಮ್ಮ ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಆದರೆ ಪ್ರತಿಯೊಂದು ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ಶೈಲಿ ಬೇರೆ .



ನಾನಿಲ್ಲಿ ನಮ್ಮ ಮನೆಯಲ್ಲಿ ಮಾತನಾಡುವಾಗ ನಾನು ಗಮನಿಸಿದ ತುಳು ಮಿಶ್ರಿತ ವಿಶಿಷ್ಠವಾದ ಕನ್ನಡ ಪದಗಳನ್ನು ಒಟ್ಟು ಮಾಡಿದ್ದೇನೆ .



೧. ಪಕ್ಕ - ಈ ಪದಕ್ಕೆ ಕನ್ನಡ ಮತ್ತು ತುಳುವಿನಲ್ಲಿ ಬೇರೆ ಬೇರೆ ಅರ್ಥಗಳಿವೆ . ಉಡುಪಿಯಲ್ಲಿ ಅದರ ಅರ್ಥ ಎಲ್ಲಾ ಕಡೆ ಹಾಗೆ ಉಡುಪಿಯಲ್ಲಿ ಪಕ್ಕ ಎಂದರೆ ಬಾಜು ಅನ್ನುವ ಅರ್ಥವೇ ಇದೆ . ಆದರೂ ತುಳು ಮಿಶ್ರಿತ  ಕನ್ನಡದಲ್ಲಿ ಅದರ ಅರ್ಥ ಬೇರೆ . ಉಡುಪಿ ಕನ್ನಡದಲ್ಲಿ ಪಕ್ಕ ಎಂದರೆ ಬೇಗನೆ ಎಂದು ಅರ್ಥ .

ಉದಾಹರಣೆಗೆ ನಾನು ಈಗ ಹೋಗಿ ಪಕ್ಕ ಬರ್ತೇನೆ . 

ಇದು ಪಕ್ಕ.ಸರಿ ಆಗುದಿಲ್ಲ .


೨ . ನಾವು ಅವಸರ ಎಂಬ ಶಬ್ದಕ್ಕೆ ತುಳು ಮಿಶ್ರಿತ ಕನ್ನಡದಲ್ಲಿ ಅಮಸರ ಎಂದು ಹೇಳುತ್ತೇವೆ . ಉದಾಹರಣೆಗೆ ಎಂಥ ಅಮ ಸರ ಮಾರ್ರೆ ನಿಂಗೆ .


೩ . ಬಾಟಲ್ ತುಂಬಾ ನೀರು ಎನ್ನಲು ಬಾಟಲ್ ನಿಲಿಕ್ಕೆ ನೀರು ತುಂಬಿಸಿದ .



೪. ತುಳಸಿ ಗಿಡ ಎನ್ನಲು ತೊಳಸಿ ಗಿಡ .


ಇದು ನನ್ನ ತಾಯಿ ಆಗಾಗ ಹೇಳುವ ಮಾತು . 

ಬತ್ತೆರ್ ತಿಂದೆರ್ ಪೋಯೇರ್

ಇದರ ಅರ್ಥ ಏನೆಂದರೆ ಯಾವಾಗ ಒಬ್ಬ ವ್ಯಕ್ತಿ ಮುಖ್ಯವಾಗಿ ಹೆಂಗಸು ಮನೆಗೆ ಬಂದು ಯಾವುದೇ ಕೆಲಸದಲ್ಲಿ ಸಹಾಯ ಮಾಡದೆ ತನ್ನ ಪಾಡಿಗೆ ತಾನು ಇದ್ದು ನಂತರ ಬೇರ್ಪಡುವುದು . 


ಈ ವಾಕ್ಯ ತುಳು ದ್ರಾವಿ ಡ ಭಾಷೆಗಳಲ್ಲಿ ಒಂದು ಎಂದು ತೋರಿಸುತ್ತದೆ .


ಉಡುಪಿಯಲ್ಲಿ  ಕನ್ನಡ ಮತ್ತು ತುಳು ಭಾಷೆಗಳು ಒಂದರಲ್ಲಿ ಒಂದು ಸೇರಿಕೊಂಡಿವೆ . ಇಂತಹುದೇ ಇನ್ನೂ ಬಹಳಷ್ಟು ಪದಗಳಿವೆ .


ಇದುವೇ ನಮ್ಮ ಕನ್ನಡ .












No comments:

Post a Comment