Saturday, November 27, 2021

ಕನ್ನಡ ಒಗಟು

 ಇತ್ತೀಚೆಗೆ ನಾನು ಈ ಕನ್ನಡ ಒಗಟಿನ ಬಗ್ಗೆ ತಿಳಿದೆ. ಇದು ನೋಡಿದಷ್ಟು ಸರಳ ಅಲ್ಲ.

ಹತ್ತು ತಲೆ ಕೆಂಪು. ಆರು ತಲೆ ಕಪ್ಪು.

ಏನಿದು ವಿಚಿತ್ರವಾಗಿದೆ. ಇಲ್ಲೇನು ತಲೆಗಳ ಬಗ್ಗೆ ಮಾತನಾಡಿದ ಹಾಗಿದೆ.

ಮೊದಲೇ ಹೇಳಿದಂತೆ ಇದು ನಾವು ತಿಳಿದಂತೆ ತಲೆಗಳ ಬಗ್ಗೆ ಅಲ್ಲ.

ಹತ್ತು ತಲೆ ಅಂದರೆ ಬೆಂಕಿ ಹ ತ್ತು ತ ಲೆ 

ಆರು ತಲೆ ಅಂದರೆ ಬೆಂಕಿ ಆರಿದ ಮೇಲೆ

ಈಗ ಈ ಒಗಟು ಬೇರೆಯದೇ ಅರ್ಥ ನೀಡುತ್ತದೆ.

ಬೆಂಕಿ ಹತ್ತಿದಾಗ ಕೆಂಪು. ಆರಿದ ಮೇಲೆ ಕಪ್ಪು.

ಇದು ಏನಿರಬಹುದು?

???

???

ಬೆಂಕಿ ಕಡ್ಡಿ!!!

No comments:

Post a Comment