ಇದು ಬರ್ಫಿ ಮಾಡುವ ಸುಲಭ ವಿಧಾನ. ನನ್ನ ತಾಯಿಗೆ ಖುಷಿ ಕೊಟ್ಟ ರೆಸಿಪಿ.
ಬೇಕಾಗುವ ಸಾಮಗ್ರಿಗಳು
ಸಕ್ಕರೆ - ೧ ಕಪ್
ಹುರಿಗಡಲೆ - ೧ ಕಪ್
ತುಪ್ಪ -. ೧/೨ ಕಪ್
ಮಾಡುವ ವಿಧಾನ
ಮೊದಲು ಸಕ್ಕರೆ ಮತ್ತು ಹುರಿಗಡಲೆ ಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಮಾಡಿಕೊಳ್ಳಿ .
ಈಗ ಒಂದು ಬಾಣಲೆಗೆ ತುಪ್ಪ ಸೇರಿಸಿ ನಂತರ ತುಪ್ಪ ಕರಗಿದ ನಂತರ ಮಿಕ್ಸಿ ಯಲ್ಲಿ ಪುಡಿ ಮಾಡಿದ ಸಕ್ಕರೆ ಮತ್ತು ಹುರಿಗಡಲೆ ಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ .
ಇದು ತಳ ಬಿಡುವಾಗ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.
No comments:
Post a Comment