ಸ್ನೇಹ ದೊಡ್ಡದು
ಒಂದು ಕಾಡಿನಲ್ಲಿ ಒಂದು ಹುಲಿ ಮತ್ತು ಒಂದು ಒಂಟೆ ತುಂಬಾ ಸ್ನೇಹಿತರಾಗಿದ್ದವು.ಕಾಡಿನಲ್ಲಿ ಎಲ್ಲ ಪ್ರಾಣಿಗಳೂ ಆಶ್ಚರ್ಯ ಪದುತಿದ್ದವು ಇವುಗಳ ಸ್ನೇಹ ಕಂಡು.ತಮ್ಮ ಕಷ್ಟ-ಸುಖ ಎಲ್ಲವನ್ನು ಹಂಚಿಕೊಳ್ಳುತಿದ್ದವು.
ಒಮ್ಮೆ ಅವುಗಳ ಮಧ್ಯೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ಮನಸ್ತಾಪ ಉಂಟಾಯಿತು.ಅದು ಎಲ್ಲಿವೆರೆಗೆ ಅಂದರೆ ಒಬ್ಬರ ಮುಖ ಒಬ್ಬರು ನೋಡಧಷ್ಟು.ಕೊನೆಗೆ ತಮ್ಮ ಜಗಳ ಪರಹರಿಸಲು ಕಾಡಿನ ರಾಜ ಸಿಂಹವೇ ಸರಿಯಾದ ವ್ಯಕ್ತಿ ಎಂದು ನ್ಯಾಯ ಕೇಳಲು ಅದರ ಬಳಿ ಹೋದವು.
ಸಿಂಹವಾದರೋ ೩ ವಾರಗಳಿಂದ ಹೊಟ್ಟೆಗಿಲ್ಲದೆ ಗುಹೆಯಲ್ಲೇ ಕುಳಿತಿತ್ತು.ಇಗ ಒಂಟೆ ಮತ್ತು ಹುಲಿ ತಮ್ಮ ಬಳಿಗೆ ಬರುತ್ತಿರುವುದನ್ನು ದೂರದಿಂದ ಗಮನಿಸಿದ ಸಿಂಹ ತನಗೆ ಹುಶರಿಲ್ಲವೆಂದು ನಾಟಕವಾಡುತ್ತ ಗುಹೆಯಲ್ಲೇ ಮಲಗಿತು.ಒಂಟೆ ಮತ್ತು ಹುಲಿ ಒಳಗೆ ಬಂದು ನರಳುತ್ತಿದ್ದ ಸಿಂಹವನ್ನು ನೋಡಿದವು.ತಮ್ಮ ಕಷ್ಟ ಹೇಳಲು ಇದು ಸರಿಯಾದ ಸಮಯ ಅಲ್ಲವೆಂದು ವಾಪಾಸ್ ಹೋಗುತ್ತಿದ್ದಾಗ ಸಿಂಹ ಅವುಗಳನ್ನು ಬಳಿಗೆ ಕರೆಯಿತು.
ಆಗ ಹುಲಿಯು ತನ್ನ ಸ್ನೇಹಿತನನ್ನು ಪರಿಚಯಿಸಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದಾಗಿಯೂ ,ಅದನ್ನು ಬಗೆಹರಿಸಬೇಕಂದು ಕೇಳಿಕೊಂಡಿತು. ಒಂಟೆಯನ್ನು ಕಡೆಗಣ್ಣಿನಿಂದ ನೋಡಿದ ಸಿಂಹ ಆಯಿತು ಎನ್ನಲು,ಹುಲಿಯು ತಮ್ಮ ಜಗಳದ ಬಗ್ಗೆ ವಿವರಿಸಲು ಶುರು ಮಾಡಿತು.ಆದರೆ ಸಿಂಹದ ಗಮನ ಒಂಟಯ. ಮೇಲೆಯೇ ಇರುವುದನ್ನು ಗಮನಿಸಿದ ಹುಲಿ ಕೇಡನ್ನು ಶಂಕಿಸಿತು. ಆಗ ಸಿಂಹ ಒಂಟೆಯ ಮೇಲೆ ಎರಗಿತು.
ಇದನ್ನು ಮೊದಲೇ ಊಹಿಸಿದ್ದ ಹುಲಿ ಒಂಟೆಯನ್ನು ಆಚೆ ತಳ್ಳಿತು.ಇದರಿಂದ ಸಿಟ್ಟಿಗೆದ್ದ ಸಿಂಹ ಹುಲಿಯ ಮೇಲೆ ಆಕ್ರಮಣ ಮಾಡಿತು.ಒಂಟೆ ಇದರಿಂದ ಬೆಚ್ಚಿ ಬಿದ್ದು ಅಲ್ಲಿಂದ ಹೊರ ಹೋಯಿತು.ಸಿಂಹ ಮತ್ತು ಹುಲ್ಲಿಯ ನಡುವೆ ಕದನ ಶುರುವಾಗಿ ಹುಲಿಯು ಮಾರನಾನ್ತಿಕವಾದ ಗಾಯಗಳೊಂದಿಗೆ ಹೊರ ಬಂದಿತು.
ಅಲ್ಲೇ ನಿಂತಿದ್ದ ಒಂಟೆಯನ್ನು ಕಂಡು ಅಲ್ಲಿಂದ ಓದಿ ಹೋಗಲು ತಿಳಿಸಿತು.ಆದರೆ ಒಂಟೆ ತನ್ನ ಸಲುವಾಗಿ ಆಪತ್ತನ್ನು ಮ್ಯೆ ಮೇಲೆ ಎಲೆದುಕೊಂದದ್ದು ಯಾಕೆ ಎಂದು ಪ್ರಶ್ನಿಸಲು ಹುಲಿ ತಮ್ಮ ಗೆಲೆತನಕ್ಕಾಗಿ ಹೀಗೆಲ್ಲ ಮಾಡಿದ್ದಾಗಿ ತಿಳಿಸಿತು.ಆಗ ಒಂಟೆ "ಸ್ನೇಹಕ್ಕಿಂತ ದೊಡ್ದು ಯಾವೂದು ಇಲ್ಲ" ಎಂದು ಅರಿಯಿತು.
chennagide.innu kathe nimminda hora barali endu ashisuve
ReplyDelete