Tuesday, February 7, 2012

ಮೊಳಕೆ ಕಟ್ಟಿದ ಹೆಸರುಕಾಳು ಜೂಸ್ ಮಾಡುವ ಬಗೆ

                                 ಮೊಳಕೆ ಕಟ್ಟಿದ ಹೆಸರುಕಾಳು ಜೂಸ್ ಮಾಡುವ ಬಗೆ
ಸಾಮಗ್ರಿಗಳು

ಮೊಳಕೆ ಕಟ್ಟಿದ  ಹೆಸರುಕಾಳು - ೧ ಕಪ್
ತೆಂಗಿನ ತುರಿ - ೧ ಕಪ್
ಏಲಕ್ಕಿ- ರುಚಿಗೆ ತಕ್ಕಷ್ಟು
ಸಕ್ಕರೆ - ೬ ಟೀ ಚಮಚ
ಹಾಲು - ೧ ಬೌಲ್

ಮಾಡುವ ವಿಧಾನ
ಮೊದಲಿಗೆ ಮೊಳಕೆ ಕಟ್ಟಿದ ಹೆಸರು ಕಾಳು, ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಮಿಕ್ಸಿ  ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ೬ ಕಪ್ ನೀರು ಮತ್ತು ಅದರಷ್ಟೇ ಪ್ರಮಾಣದ (೬ ಚಮಚ) ಸಕ್ಕರೆ ಹಾಕಿ. ಸಕ್ಕರೆ ಕರಗುವ ತನಕ ಚೆನ್ನಾಗಿ ಕುದಿಸಿ. ನಂತರ ಇದಕ್ಕೆ ರುಬ್ಬಿದ ಮಿಶ್ರಣ, ಕುದಿಸಿದ ಹಾಲು ಹಾಕಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಬೇಕಿದ್ದರೆ ಲವಂಗದ ಪುಡಿ ಹಾಕಿ. ಇದನ್ನು ಬಿಸಿಯಾಗಿ ಮಾಲ್ಟ್ ಥರ ಅಥವಾ ತಣ್ಣಗೆ ಜೂಸ್ ಥರ ಕುಡಿಯಬಹುದು .





No comments:

Post a Comment