ಕಾರ್ಯವಾಸಿ ಕತ್ತೆ ಕಾಲು ಹಿಡಿ
ಇದು ಕನ್ನಡದ ಒಂದು ನಾಣ್ಣುಡಿ . ನಮ್ಮ ಕೆಲಸ ಆಗಬೇಕಾದಾಗ ನಮಗಿಂತ ಕಿರಿಯರನ್ನೂ , ಅಥವಾ ನಮಗಿಂತ ಕೆಳ ಸ್ತರದಲ್ಲಿ ಇರುವವರನ್ನೂ ನಾವು ಒಲಿಸಿಕೊಳ್ಳಬೇಕಾಗುತ್ತದೆ . ಕೆಲವೊಮ್ಮೆ ನಮಗೆ ಇಷ್ಟವಿಲ್ಲದಿದ್ದರೂ ಈ\ ತೆರನಾದ ವರ್ತನೆ ಅನಿವಾರ್ಯವಾಗುತ್ತದೆ .
ಇದರ ಉಗಮದ ಬಗ್ಗೆ ಒಂದು ಕಥೆ. ಶ್ರೀಕೃಷ್ಣನ ತಂದೆ ವಸುದೇವ . ವಸುದೇವ ಮತ್ತು ಆತನ ಪತ್ನಿ ದೇವಕಿ ಇಬ್ಬರನ್ನೂ ದುರುಳ ಕಂಸ ಸೆರೆಯಲ್ಲಿಡುತ್ತಾನೆ . ತನ್ನ ಮೃತ್ಯುವಾದ ಶ್ರೀಕೃಷ್ಣನ ಜನನವನ್ನೇ ತಡೆಯುವ ಉದ್ದೇಶ ಆತನದು . ಹೀಗಿರಲು ಶ್ರೀಕೃಷ್ಣನ ಜನನ ಸೆರೆಯಲ್ಲೇ ಆಗುತ್ತದೆ.
ಅಶರೀರವಾಣಿ ಸೂಚಿಸಿದಂತೆ ವಸುದೇವ ಮಗುವನ್ನು ನಂದಗೋಪನ ಬಳಿ ಬಿಡಲು ನಿರ್ಧರಿಸುತ್ತಾನೆ. ಆ ಇರುಳಿನಲ್ಲಿ ಕಾವಲು ಭಟರಿಗೆ ಗಾಢ ನಿದ್ದೆ. ವಸುದೇವ ಯಾವ ಅಡ್ಡಿ ಇಲ್ಲದೆಯೇ ಸೆರೆಯಿಂದ ಹೊರಗೆ ಬರುತ್ತಾನೆ. ಆಗ ಆತನಿಗೆ ಹೊರಗೆ ನಿಂತಿದ್ದ ಒಂದು ಕತ್ತೆ ಕಾಣಿಸುತ್ತದೆ.
ಆ ಇರುಳಿನಲ್ಲಿ ವಸುದೇವ ನ ಕಂಡು ಕತ್ತೆ ಇನ್ನೇನು ಬೊಬ್ಬೆ ಹೊಡೆಯಬೇಕು , ಅಷ್ಟರಲ್ಲಿ ಅಪಾಯವನ್ನು ಗ್ರಹಿಸಿದ ವಸುದೇವ ಅದರ ಬಳಿ ಬರುತ್ತಾನೆ.ಕಂಸ ಎಲ್ಲಿಯಾದರೂ ಈ ಶಬ್ದದಿಂದ ಎಚ್ಚರಗೊಂಡರೆ , ಅಪಾಯ ತಪ್ಪಿದಲ್ಲ . ಆಗ ವಸುದೇವ ಕತ್ತೆಯ ಕಾಲು ಹಿಡಿದು ಶಬ್ದ ಮಾಡದಂತೆ ಪ್ರಾರ್ಥಿಸುತ್ತಾನೆ .
ವಸುದೇವ ಕತ್ತೆಯ ಕಾಲು ಹಿಡಿದು ತನ್ನ ಕೆಲಸ ಸಾಂಗವಾಗಿ ನಡೆಯುವಂತೆ ಮಾಡಿದ. ಹೀಗಿರುವಾಗ ನಮ್ಮದೇನು ಮಹಾ?

No comments:
Post a Comment