ಅಪರಿಚಿತ ಮರ
ನಮ್ಮ ಪಕ್ಕದ ಮನೆಯ ಆವರಣದಲ್ಲಿ ಒಂದು ದಪ್ಪನೆಯ ಮರ. ಆ ಮರದಲ್ಲಿ ಹಣ್ಣು ಆಗುವುದನ್ನು ನಾ ಕಾಣೆ . ಆ ಮರ ಕಳೆ ಗಿಡ ಎಂದು ನಾನು ಯೊಚಿಸುತ್ತಿದ್ದೆ.
ಆದರೆ ಹೋದ ತಿಂಗಳು ನಮ್ಮ ಮನೆಯ ಅಂಗಳದಲ್ಲಿ ಸುವಾಸನೆಯೋ ಸುವಾಸನೆ. ನನಗೆ ಆ ಸುವಾಸನೆಯ ಮೂಲ ಗೊತ್ತಾಗಿರಲಿಲ್ಲ .
ಆದರೆ ಈ ತಿಂಗಳು ಸಂಜೆ ಆಗುತ್ತಿದ್ದಂತೆ ಅಂಗಳದಲ್ಲಿ ಹೂವುಗಳ ಹಾಸಿಗೆ. ಅದೇ ಸುವಾಸನೆ ಭರಿತ ಹೂವುಗಳು ಪುಟ್ಟ ಪುಟ್ಟ ಬಿಳಿಯ ಹೂವುಗಳು .
ಆ ದಪ್ಪನೆಯ ಮರದಿಂದ ಉದುರುತ್ತಿವೆ ಹೂವುಗಳು . ಅಲ್ಲೇ ಸಮೀಪದಲ್ಲಿ ನಿಂತರೆ ನಮ್ಮ ತಲೆಯ ಮೇಲೆಯೇ ಪುಷ್ಪಾಭಿಷೇಕ ! ಅಂಗಳದ ತುಂಬಾ ಆ ಹೂವಿನ ಪರಿಮಳ .
ಆ ಹೂವು ಸುರಗಿ ಹೂವು . ನಮ್ಮ ಕಡೆ ನಾಗನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ . ಈ ಹೂವು ನಾಗ ಪ್ರಿಯ . ಅದರ ಸುವಾಸನೆಗೆ ಮನುಷ್ಯರೇ ಮರುಳಾಗುತ್ತಿದ್ದಾರೆ . ಇನ್ನು ನಾಗರ ಹಾವು ಮರುಳಾಗುದುವುದರಲ್ಲಿ ಏನೂ ಆಶ್ಚರ್ಯವಿಲ್ಲ . ಅನಾಮಿಕ ಹೂವಿನ ಪರಿಚಯ ವಾದದ್ದು ಹೀಗೆ .

No comments:
Post a Comment