ನಿನ್ನೆ ಉಡುಪಿಯಲ್ಲಿ ದಿನವಿಡೀ ಚಿರಿ - ಪಿರಿ ( ಚೊರ್ಪಟ್ ) ಮಳೆ .
ಕರಾವಳಿಯಲ್ಲಿ ಮಳೆಯ ಈ ರೂಪ ಹೊಸದೇನಲ್ಲ . ಇಡೀ ಬೇಸಿಗೆಯ ಸುಡುವ ಬಿಸಿಲನ್ನು ಈ ರೀತಿಯ ಮಳೆಗಾಲದ ಮಳೆಯ ನಿರೀಕ್ಷೆಯಲ್ಲೇ ಕಳೆಯುವವರು ನಾವು .
ಆದರೆ ನಿನ್ನೆಯ ಅಕಾಲಿಕ ಮಳೆ ಇದಕ್ಕೆ ಹೊರತಾದದ್ದು . ಬೇಸಿಗೆಯಲ್ಲಿ ಈ ರೀತಿಯ ಮಳೆ ನನಗೆ ಅಪರೂಪ . ಬೇಸಿಗೆಯಲ್ಲಿ ಇಲ್ಲಿ ಮಳೆ ಬರುವುದೇ ದೊಡ್ಡ ವಿಷಯ .
ಅದರಲ್ಲೂ ಬೆಳಗ್ಗೆಯಿಂದ ಹಠ ಹಿಡಿದ ಮಗುವಿನಂತೆ ಕಾಡುವ ಮಳೆ ಮಳೆಗಾಲಕ್ಕೆ ಬಂದರೆ ಚೆನ್ನ . ಅದಕ್ಕೂ ಗೌರವ !
ಆದರೂ ಈ ಮಳೆಯಿಂದ ತಾಪಮಾನ ಕಡಿಮೆಯಾದದ್ದು ಸುಳ್ಳಲ್ಲ .