Tuesday, October 1, 2019

ಗಾಂಧೀಜಿ ಸ್ವತಃ ಏಕೆ ಗಾಂಧಿ ಟೋಪಿ ಧರಿಸಲಿಲ್ಲ ?

ಗಾಂಧಿ ಜಯಂತಿ ದಿನಾಚರಣೆ ಪ್ರಯುಕ್ತ ನನ್ನ ಬ್ಲಾಗ್ ಲೇಖನ .

ರಾಜಕಾರಣಿ ಗಳು ಗಾಂಧಿ ಟೋಪಿ ಧರಿಸುವುದು ಸರ್ವೇ ಸಾಮಾನ್ಯ . ಅದನ್ನು ಧರಿಸಿ ತಾವು ಗಾಂಧಿ ಜಿಯವರ ಹಿಂಬಾಲಕರು ಎಂದು ಫೋಸ್ ಕೊಡುವುದು ನಾವೆಲ್ಲಾ ನೋಡಿದ್ದೇವೆ .


ಆದರೆ ನಾನು ಒಮ್ಮೆಯೂ ಗಾಂಧೀಜಿ ಈ ಟೋಪಿಗಳನ್ನು ಧರಿಸಿರುವ ಫೋಟೋ ನೋಡಿಲ್ಲ . ಮತ್ತೇಕೆ ಇದಕ್ಕೆ ಈ ಹೆಸರು ?


ನನಗೆ ತಿಳಿದು ಬಂದ ವಿಷಯ ಅಂದ್ರೆ ಗಾಂಧೀಜಿಯವರು ಮೊದಲು ಈ ಟೋಪಿಯನ್ನು ಧರಿಸುತ್ತಿದ್ದರು . ಒಂದು ಸಲ ಗಾಂಧೀಜಿ ಅವರು ಒಂದು ಸಮಾರಂಭದಲ್ಲಿ ತನ್ನ ಹಾಗೆ ಗಾಂಧಿ ಟೋಪಿ ಧರಿಸಿದ ವ್ಯಕ್ತಿಯ ನ್ನು ಕಂಡರು .

ಆದರೆ ಅ ವ್ಯಕ್ತಿ ಒಬ್ಬ ಭ್ರಷ್ಟ ನೇತಾರ ಆಗಿದ್ದ. ಆಗಲೇ ಗಾಂಧೀಜಿಯವರು ಇನ್ನು ಮುಂದೆ ತಾನು ಗಾಂಧಿ ಟೋಪಿ ಧರಿಸುವುದು ಸೂಕ್ತವಲ್ಲ ಎಂದು ನಿರ್ಣಯಿಸಿದರು .


ಇದನ್ನು ಪೇಪರ್ನಲ್ಲಿ ಓದಿದೆ . ಸತ್ಯಾಸತ್ಯತೆಗಳನ್ನು ನಾನು ತಿಳಿದಿಲ್ಲ . ಏಕೆಂದರೆ ಗಾಂಧಿ ಜಿಯವರು ಇದ್ದಾಗ ನಾನು ಹುಟ್ಟಿಯೇ ಇರಲಿಲ್ಲ !!

No comments:

Post a Comment