Tuesday, October 3, 2023

ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಏಕೆ ಊಟ ಹಾಕುತ್ತೇವೆ?

 ಈ ವರ್ಷದ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14 ರವರೆಗೆ ಪಿತೃಪಕ್ಷ.


ಈ ಸಮಯದಲ್ಲಿ ನಮ್ಮ ಪಿತೃಗಳು ಅಥವಾ ನಮ್ಮ ಪೂರ್ವಜರನ್ನು ನೆನೆಸಿಕೊಂಡು ಅವರು ಕಾಗೆಯ ರೂಪದಲ್ಲಿ ಇರುತ್ತಾರೆಂದು ಭಾವಿಸಿ ಕಾಗೆಗಳಿಗೆ ಆಹಾರ ನೀಡುತ್ತೇವೆ 


ಆದರೆ ಕಾಗೆಯೇ ಯಾಕೆ?


1. ಕಾಗೆ ಸುಲಭವಾಗಿ ಕಾಣಸಿಗುತ್ತದೆ 

2. ಕಾಗೆಗೆ ಏನು ಕೊಟ್ಟರೂ ತಿನ್ನುತ್ತದೆ 

3. ಸರಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಏಳುವ ಹಕ್ಕಿ ಇದೇ ಹೊರತು ಕೋಳಿಯಲ್ಲ 

4. ಆಹಾರ ಸಿಕ್ಕಿದರೆ ತನ್ನ ಬಳಗವನ್ನೇ ಕರೆಯುತ್ತದೆ 

5. ಕಾಗೆ ಸಂಜೆ ಆದ ನಂತರ ಆಹಾರ ಮುಟ್ಟದು ..


 ಕಾಗೆಯಂತೆ ಒಳ್ಳೆಯ ಅಭ್ಯಾಸಗಳಿರುವ ಹಕ್ಕಿ ವಿರಳ.

 ಆದ್ದರಿಂದ ಕಾಗೆಯನ್ನು ಪಿತೃರೂಪಿ ಎಂದು   ಕರೆಯುತ್ತಾರೆ .. ಅದಕ್ಕೆ ಆಹಾರ ನೀಡುತ್ತಾರೆ .


ಈ 15 ದಿನದಲ್ಲಿ ಯಾವುದಾದರೂ ಒಂದು ದಿನ ಮಾಡುವ ಅನ್ನ ದಾನ ಬಹು ಶ್ರೇಷ್ಠ. ಹಾಗಾಗಿ ಪರಿಚಿತರನ್ನು ಕರೆದು ಊಟ ಹಾಕುತ್ತಾರೆ.

No comments:

Post a Comment