ಬಿಲ್ಲಿಯ ಮಗು
ಬಿಲ್ಲಿಗೊಂದು ಮಗು ಹುಟ್ಟಿದೆ
ಈಗ ಬಿಲ್ಲಿಯ ಜವಾಬ್ದಾರಿ ಹೆಚ್ಚಿದೆ
ಎಲ್ಲಿಗೆ ಹೋದರು ಮಗು ಇರಲೇ ಬೇಕು
ಕೊನೆಗೆ ಹಾಲು ಕದ್ದು ಕುಡಿಯಲೂ ಮಗುವಿಗೆ ಟ್ರೇನಿಂಗ ಆಗಲೇ ಬೇಕು!
Sunday, November 28, 2010
ನಮ್ಮ ಬೆಕ್ಕು ಬಿಲ್ಲಿ
ನಮ್ಮ ಬೆಕ್ಕು ಬಿಲ್ಲಿ
ನಮ್ಮ ಮನೆಯ ಬೆಕ್ಕು ಬಿಲ್ಲಿ
ಹುದುಕುತಿತ್ತು,ಕುಡಿಯಲು ಹಾಲು ಎಲ್ಲಿ?
ಹಾಲಿಗಾಗಿ ಹುಡುಕಿ ಸೋತ ಬಿಲ್ಲಿ
ಅಂದುಕೊಂಡಿತು,"ಕೈಗೆಟುಕದ ದ್ರಾಕ್ಷಿ ಹುಳಿ"!
ನಮ್ಮ ಮನೆಯ ಬೆಕ್ಕು ಬಿಲ್ಲಿ
ಹುದುಕುತಿತ್ತು,ಕುಡಿಯಲು ಹಾಲು ಎಲ್ಲಿ?
ಹಾಲಿಗಾಗಿ ಹುಡುಕಿ ಸೋತ ಬಿಲ್ಲಿ
ಅಂದುಕೊಂಡಿತು,"ಕೈಗೆಟುಕದ ದ್ರಾಕ್ಷಿ ಹುಳಿ"!
Saturday, November 27, 2010
ಚಾಮುಂಡಿಯ ಹುಟ್ಟು
ಚಾಮುಂಡಿಯ ಹುಟ್ಟು
ಒಮ್ಮೆ ದೇವತೆಗಳಿಗೂ,ದಾನವರಿಗೂ ಭೀಕರ ಯುದ್ಧವಾಗಿ ದೇವತೆಗಳಿಗೆ ಸೋಲಾಯಿತು.ದಾನವರು ವಿಜಯಿಗಳಾಗಿ ದೇವತೆಗಳ ಎಲ್ಲ ಕೆಲಸವನ್ನು ತಾವೇ ಮಾಡಲು ಪ್ರಾರಂಭಿಸಿದರು.ಯಜ್ಯ-ಯಾಗಾದಿಗಳಲ್ಲಿ ಹವಿಸ್ಸನ್ನು ತಾವೇ ತೆಗೆದುಕೊಳ್ಳಲು ಪ್ರಾರಂಭಿಸಿದರು.ಮತ್ತು ದೇವತೆಗಳ ವಾಹನಗಳನ್ನು ಮತ್ತು ಅಷ್ಟ ದಿಕ್ಪಾಲಕರ ಕೆಲಸವನ್ನು ಕಸಿದುಕೊಂಡು,ದೇವತೆಗಳನ್ನು ಸ್ವರ್ಗದಿಂದ ಓಡಿಸಿದರು.
ಇದರಿಂದ ಚಿಂತಿತರಾದ ದೇವತೆಗಳು ಜಾಹ್ನವಿ ನದಿ ತೀರದಲ್ಲಿ ಕುಳಿತು ವಿಷ್ಣುವನ್ನು ಸ್ತುತಿಸಲಾರಂಭಿಸಿದರು. ಆಗ ಸ್ನಾನಕ್ಕೆಂದು ನದಿಗೆ ತೆರಳುತ್ತಿದ್ದ ಪಾರ್ವತಿಯು ಇವರನ್ನು ಗಮನಿಸಿದಳು.ಅವರ ಬಳಿ ಬಂದು ವಿಷಯವೇನೆಂದು ವಿಚಾರಿಸಿದಾಗ ದೇವತೆಗಳು ತಮ್ಮ ಕಷ್ಟವನ್ನು ವಿವರಿಸಿದರು.ಇದರಿಂದ ಕೋಪಗೊಂಡ ಪಾರ್ವತಿಯ ದೇಹದಿಂದ "ಕಾಳಿ"ಯು ಉದ್ಭವಿಸಿದಳು.ಆ ಕಾಳಿಯು ಕಪ್ಪನೆಯ ಶರೀರವನ್ನು ಹೊಂದಿದ್ದು ನೋಡಲು ಭಯಂಕರ ಆಗಿದ್ದಳು.
ಪಾರ್ವತಿಯು ಕಾಳಿಯ ಬಳಿ ಆಕೆಯ ಜನ್ಮ ರಹಸ್ಯವನ್ನು ತಿಳಿಸಿದಾಗ ಕಾಳಿಯು ದಾನವರನ್ನು ಕೊಲ್ಲಲು ಹೊರಟಳು.ಆಗ ಪಾರ್ವತಿಯು ದಾನವರೇ ನಮ್ಮ ಹತ್ತಿರ ಬರುವಂತೆ ಮಾಡಲು ಉಪಾಯವನ್ನು ಯೋಚಿಸಿದಳು.ಆಗ ದಾನವರ ಅಧಿಪತಿಯಾಗಿದ್ದವರು ಚಂಡ-ಮುಂಡ ಎಂಬ ರಾಕ್ಷಸರು.ಕಾಳಿಯು ಸುಂದರ ರೂಪವನ್ನು ಧರಿಸಿ ಅತ್ತಿತ್ತ ಓಡಾಡುತಿದ್ದಳು.ಇದು ಆ ರಾಕ್ಷಸರ ಕಿವಿಗೆ ಬಿಟ್ಟು ಮತ್ತು ಅವರು ಆಕೆಯ ಬಳಿಗೆ ತಮ್ಮ ದೂತನನ್ನು ತಮ್ಮ ಪರವಾಗಿ ಮಾತನಾಡಲು ಕಳುಹಿಸಿದರು.
ದೂತನು ಕಾಳಿಯ ಬಳಿ ಬಂದು ವಿಷಯವನ್ನು ತಿಳಿಸಿದಾಗ ಕಾಳಿಯು "ನನ್ನ ಜೊತೆ ಯುಧ್ಧ ಮಾಡಿ ಯಾರು ವಿಜಯಿಗಳಗುವರೋ ,ಅವರನ್ನೇ ತಾನು ಮದುವೆಯಾಗಲು ಇಚ್ಚಿಸಿದುವಾಗಿ ತಿಳಿಸಿದಳು.ಇದನ್ನು ದೂತನು ಚಂಡ-ಮುಂಡ ರಾಕ್ಷಸರಿಗೆ ತಲುಪಿಸಿದನು.ತಮ್ಮ ಬಲ-ಪರಾಕ್ರಮಲಿಂದ ದೇವತೆಗಳನ್ನು ಸೋಲಿಸಿ ಮದೊನ್ಮತ್ತರಾಗಿದ್ದ ಚಂಡ-ಮುಂಡ ರು ಅದಕ್ಕೆ ಸಂತೋಷದಿಂದಲೇ ಒಪ್ಪಿದರು.
ಚಂಡ-ಮುಂದರು ಮೊದಲು ಕಾಳಿಯ ಬಳಿ ಧೂಮ್ರ ಲೋಚನ ಎಂಬ ತಮ್ಮ ಬಂಟನನ್ನು ಸೈನ್ಯದ ಸಹಿತ ಕಳುಹಿಸಿದರು.ಆದರೆ ಕಾಳಿಯು ಹೂಂಕಾರ ಮಾತ್ರದಿಂದ ಆತನನ್ನು ವಧಿಸಿದಳು ಮತ್ತು ಆತ ಕರೆ ತಂದಿದ್ದ ಸೈನ್ಯ ದಿಕ್ಕಾಪಾಲಾಗಿ ಚದುರಿತು.
ಇದನ್ನು ತಿಳಿದ ಚಂಡ=ಮುಂಡರು ತಾವೇ ಯುಧ್ಧಕ್ಕೆ ಹೊರಟರು.ಇದನ್ನು ಮೊದಲೇ ಊಹಿಸಿದ್ದ ಕಾಳಿಯು ತನ್ನ ನೈಜ ರೂಪದಲ್ಲಿ ಯುದ್ಧಕ್ಕೆ ಸಿದ್ಧವಾಗಿದ್ದಳು.ರಾಕ್ಷಸರು ಬಂದ ಕೂಡಲೇ ಅವರ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದಳು.ಘೋರ ಕದನ ನಡೆಯಿತು.ಕೊನೆಗೆ ಕಾಳಿಯು ಅವರೀರ್ವರ ತಲೆಯನ್ನು ಕತ್ತರಿಸಿ ಒಂದೊಂದು ಕೈಯಲ್ಲಿ ಹಿಡಿದುಕೊಂಡು ಪಾರ್ವತಿಯ ಬಳಿ ಬಂದಳು.
ಚಂಡ-ಮುಂಡರು ಹತರಾಗಿರುವುದನ್ನು ಕಂಡು ದೇವತೆಗಳು ಕಾಳಿಯನ್ನು ಸ್ತುತಿಸಿದರು. ಆಗ ಪಾರ್ವತಿಯು ಕಾಳಿಯ ಬಳಿ ಬಂದು ಚಂಡ-ಮುಂಡರ ಸಾವಿಗೆ ಕಾರಣಳಾದ ಕಾಳಿಯು ಇನ್ನು ಮುಂದೆ "ಚಾಮುಂಡಿ" ಎಂದು ಪ್ರಸಿದ್ಧಳಾಗುವಂತೆ ಹರಸಿದಳು.

Friday, November 26, 2010
ಮಧು-ಕೈಟಭ ವಧೆ
ಮಧು-ಕೈಟಭ ವಧೆ
ಒಮ್ಮೆ ಜಗತ್ತಿನಲ್ಲಿ ಪ್ರಳಯವಾಗಿ ಎಲ್ಲ ಮುಳುಗಿತು.ಸಕಲ ಜೀವರಾಶಿಗಳೂ ಅಳಿದು ಹೋದವು.ಈಗ
ಮತ್ತೊಮ್ಮೆ ಸೃಷ್ಟಿ ಕ್ರಿಯೆ ನಡಿಬೇಕು.ಅಗ ಭಗವಾನ್ ವಿಷ್ಣು ಯೋಗನಿದ್ರೆಗೆ ಜಾರಿದ.ಆದರೆ ಆತನ
ನಾಭಿಯಿಂದ ಹುಟ್ಟಿದ ಬ್ರಹ್ಮನು ಸೃಷ್ಟಿ ಕ್ರಿಯೆಯಲ್ಲಿ ತೊಡಗಿದ್ದ.
ಆಗ ನಿದ್ರೆಗೆ ಜಾರಿದ್ದ ವಿಷ್ಣುವಿನ ಕಿವಿಯಿಂದ ಮಧು-ಕೈಟಭ ಎಂಬ ಘೋರ ರಾಕ್ಷಸರ ಜನನವಾಯಿತು.ಆ ರಾಕ್ಷಸರು ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದ ಬ್ರಹ್ಮನನ್ನು ಕೊಲ್ಲಲು ಹವಣಿಸಿದರು.ಆದರೆ ವಿಷ್ಣುವು ಇನ್ನೂ ಯೋಗ ನಿದ್ರೆಯಿಂದ ಎಚ್ಚೆತ್ತಿಲ್ಲ.ಇದರಿಂದ ಚಿಂತಿತನಾದ ಬ್ರಹ್ಮನು ವಿಷ್ಣುವಿನ ಯೋಗನಿದ್ರೆಗೆ ಕಾರಣಳಾದ ಯೋಗಮಾಯೆಯನ್ನು ಸ್ತುತಿಸಿದನು.
ಇದರಿಂದ ಸಂಪ್ರೀತಳಾದ ಯೋಗಮಾಯೆ ವಿಷ್ಣುವಿನ ದೇಹದಿಂದ ಹೊರ ಬಂದಳು. ಮತ್ತು ಆಕೆ ಮಧು-ಕೈಟಭ ರಾಕ್ಷಸರ ದೇಹವನ್ನು ಹೊಕ್ಕಳು. ವಿಷ್ಣುವು ನಿದ್ರೆಯಿಂದ ಎಚ್ಚೆತ್ತು ನೋಡಲು ಮಧು-ಕೈಟಭರು ಬ್ರಹ್ಮನನ್ನೇ ಕೊಲ್ಲಲು ಹೊರಟಿರುವುದನ್ನು ಕಂಡನು.ಕೂಡಲೇ ಅವರ ಜೊತೆ ಯುಧ್ಧವನ್ನು ಪ್ರಾರಂಭಿಸಿದನು.
ಯುಧ್ಧ ಸುಮಾರು ೫,೦೦೦ ವರುಷಗಳ ತನಕ ನಡೆಯಿತು.ಆದರೆ ರಾಕ್ಷಸರು ಮಣಿಯುವ ಸೂಚನೆ ಕಾಣುತ್ತಿಲ್ಲ.ಆಗ ಯೋಗಮಾಯೆ ಮತ್ತೆ ರಾಕ್ಷಸರು ವಿಷ್ಣುವಿನಲ್ಲಿ ಮೋಹ ಗೊಳ್ಳುವಂತೆ ಮಾಡಿದಳು. ಆಗ ಆ ರಾಕ್ಷಸರು ವಿಷ್ಣುವಿಗೆ ತಾವು ಅವನಲ್ಲಿ ಪ್ರೀತಿಯಿಂದಿರಲು ಬಯಸುವುದಾಗಿ ಮತ್ತು ವರವನ್ನು ಕೇಳಲು ತಿಳಿಸಿದರು. ಆಗ ವಿಷ್ಣುವು ಅವರೀರ್ವರೂ ಈಗಲೇ ತನ್ನಿದ ಹತರಾಗಬೇಕೆಂದು ತಿಳಿಸಿದನು.ಮಾಯೆಗೆ ಒಳಗಾಗಿದ್ದ ರಾಕ್ಷಸರು ಅದಕ್ಕೆ ಒಪ್ಪಿದರು.ಆಗ ವಿಷ್ಣುವು ಅವರೀರ್ವರನ್ನೂ ಸಂಹರಿಸಿದನು.
ಹೀಗೆ ವಿಷ್ಣುವಿಗೆ "ಮಧುಸೂದನ" ಎಂಬ ಹೆಸರು ಬಂತು.

Thursday, November 25, 2010
ಸ್ನೇಹ ದೊಡ್ಡದು
ಸ್ನೇಹ ದೊಡ್ಡದು
ಒಂದು ಕಾಡಿನಲ್ಲಿ ಒಂದು ಹುಲಿ ಮತ್ತು ಒಂದು ಒಂಟೆ ತುಂಬಾ ಸ್ನೇಹಿತರಾಗಿದ್ದವು.ಕಾಡಿನಲ್ಲಿ ಎಲ್ಲ ಪ್ರಾಣಿಗಳೂ ಆಶ್ಚರ್ಯ ಪದುತಿದ್ದವು ಇವುಗಳ ಸ್ನೇಹ ಕಂಡು.ತಮ್ಮ ಕಷ್ಟ-ಸುಖ ಎಲ್ಲವನ್ನು ಹಂಚಿಕೊಳ್ಳುತಿದ್ದವು.
ಒಮ್ಮೆ ಅವುಗಳ ಮಧ್ಯೆ ಒಂದು ಕ್ಷುಲ್ಲಕ ಕಾರಣಕ್ಕಾಗಿ ಮನಸ್ತಾಪ ಉಂಟಾಯಿತು.ಅದು ಎಲ್ಲಿವೆರೆಗೆ ಅಂದರೆ ಒಬ್ಬರ ಮುಖ ಒಬ್ಬರು ನೋಡಧಷ್ಟು.ಕೊನೆಗೆ ತಮ್ಮ ಜಗಳ ಪರಹರಿಸಲು ಕಾಡಿನ ರಾಜ ಸಿಂಹವೇ ಸರಿಯಾದ ವ್ಯಕ್ತಿ ಎಂದು ನ್ಯಾಯ ಕೇಳಲು ಅದರ ಬಳಿ ಹೋದವು.
ಸಿಂಹವಾದರೋ ೩ ವಾರಗಳಿಂದ ಹೊಟ್ಟೆಗಿಲ್ಲದೆ ಗುಹೆಯಲ್ಲೇ ಕುಳಿತಿತ್ತು.ಇಗ ಒಂಟೆ ಮತ್ತು ಹುಲಿ ತಮ್ಮ ಬಳಿಗೆ ಬರುತ್ತಿರುವುದನ್ನು ದೂರದಿಂದ ಗಮನಿಸಿದ ಸಿಂಹ ತನಗೆ ಹುಶರಿಲ್ಲವೆಂದು ನಾಟಕವಾಡುತ್ತ ಗುಹೆಯಲ್ಲೇ ಮಲಗಿತು.ಒಂಟೆ ಮತ್ತು ಹುಲಿ ಒಳಗೆ ಬಂದು ನರಳುತ್ತಿದ್ದ ಸಿಂಹವನ್ನು ನೋಡಿದವು.ತಮ್ಮ ಕಷ್ಟ ಹೇಳಲು ಇದು ಸರಿಯಾದ ಸಮಯ ಅಲ್ಲವೆಂದು ವಾಪಾಸ್ ಹೋಗುತ್ತಿದ್ದಾಗ ಸಿಂಹ ಅವುಗಳನ್ನು ಬಳಿಗೆ ಕರೆಯಿತು.
ಆಗ ಹುಲಿಯು ತನ್ನ ಸ್ನೇಹಿತನನ್ನು ಪರಿಚಯಿಸಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದಾಗಿಯೂ ,ಅದನ್ನು ಬಗೆಹರಿಸಬೇಕಂದು ಕೇಳಿಕೊಂಡಿತು. ಒಂಟೆಯನ್ನು ಕಡೆಗಣ್ಣಿನಿಂದ ನೋಡಿದ ಸಿಂಹ ಆಯಿತು ಎನ್ನಲು,ಹುಲಿಯು ತಮ್ಮ ಜಗಳದ ಬಗ್ಗೆ ವಿವರಿಸಲು ಶುರು ಮಾಡಿತು.ಆದರೆ ಸಿಂಹದ ಗಮನ ಒಂಟಯ. ಮೇಲೆಯೇ ಇರುವುದನ್ನು ಗಮನಿಸಿದ ಹುಲಿ ಕೇಡನ್ನು ಶಂಕಿಸಿತು. ಆಗ ಸಿಂಹ ಒಂಟೆಯ ಮೇಲೆ ಎರಗಿತು.
ಇದನ್ನು ಮೊದಲೇ ಊಹಿಸಿದ್ದ ಹುಲಿ ಒಂಟೆಯನ್ನು ಆಚೆ ತಳ್ಳಿತು.ಇದರಿಂದ ಸಿಟ್ಟಿಗೆದ್ದ ಸಿಂಹ ಹುಲಿಯ ಮೇಲೆ ಆಕ್ರಮಣ ಮಾಡಿತು.ಒಂಟೆ ಇದರಿಂದ ಬೆಚ್ಚಿ ಬಿದ್ದು ಅಲ್ಲಿಂದ ಹೊರ ಹೋಯಿತು.ಸಿಂಹ ಮತ್ತು ಹುಲ್ಲಿಯ ನಡುವೆ ಕದನ ಶುರುವಾಗಿ ಹುಲಿಯು ಮಾರನಾನ್ತಿಕವಾದ ಗಾಯಗಳೊಂದಿಗೆ ಹೊರ ಬಂದಿತು.
ಅಲ್ಲೇ ನಿಂತಿದ್ದ ಒಂಟೆಯನ್ನು ಕಂಡು ಅಲ್ಲಿಂದ ಓದಿ ಹೋಗಲು ತಿಳಿಸಿತು.ಆದರೆ ಒಂಟೆ ತನ್ನ ಸಲುವಾಗಿ ಆಪತ್ತನ್ನು ಮ್ಯೆ ಮೇಲೆ ಎಲೆದುಕೊಂದದ್ದು ಯಾಕೆ ಎಂದು ಪ್ರಶ್ನಿಸಲು ಹುಲಿ ತಮ್ಮ ಗೆಲೆತನಕ್ಕಾಗಿ ಹೀಗೆಲ್ಲ ಮಾಡಿದ್ದಾಗಿ ತಿಳಿಸಿತು.ಆಗ ಒಂಟೆ "ಸ್ನೇಹಕ್ಕಿಂತ ದೊಡ್ದು ಯಾವೂದು ಇಲ್ಲ" ಎಂದು ಅರಿಯಿತು.

Subscribe to:
Posts (Atom)