Wednesday, October 22, 2014

ಕ್ಷುಲ್ಲಕ ವಿಚಾರಗಳಿಗೆ ಜಗಳ ಮಾಡುವುದು ಸರಿಯಲ್ಲ

                                      ಕ್ಷುಲ್ಲಕ ವಿಚಾರಗಳಿಗೆ ಜಗಳ ಮಾಡುವುದು ಸರಿಯಲ್ಲ 

ಒಮ್ಮೆ ೨ ಸಿಂಹಗಳು ನೀರು ಕುಡಿಯಲೆಂದು ಕೆರೆಯ ಬಳಿ  ಏಕ ಕಾಲಕ್ಕೆ ಬಂದವು . ಎರಡೂ ಸಿಂಹಗಳಿಗೆ ತಾನೇ  ಮೊದಲು ನೀರು ಕುಡಿಯಬೇಕೆಂಬ ಹಠ .

ಸರಿ , ಶುರುವಾಯಿತು ಸಿಂಹಗಳ ನಡುವೆ ಕಾದಾಟ . ತಮ್ಮಿಬ್ಬರೊಳಗೆ ಬಲಾಡ್ಯರು ಯಾರೆಂದು ನೋಡಲು . ಕದನ ವಿಕೋಪಕ್ಕೆ ತಿರುಗಿತು .

ಮೊದಲೇ ಬಾಯಾರಿದ್ದ ಸಿಂಹಗಳು ಈ ಕದನದಿಂದ ಇನ್ನಷ್ಟು ನಿಶ್ಶ್ಯಕ್ತಿ ಗೆ ಒಳಗಾದವು . ದೇಹದ ತುಂಬಾ ಆದ ಗಾಯಗಳಿಂದ ರಕ್ತ ಒಸರಲಾರಂಭಿಸಿತು .

ರಕ್ತದ ವಾಸನೆಯ ಜಾಡು ಹಿಡಿದ ರಣಹದ್ದುಗಳು ಅಲ್ಲೇ ತಿರುಗಲಾರಂಭಿಸಿದವು . ಇದನ್ನು ಗಮನಿಸಿದ ಸಿಂಹಗಳಿಗೆ ಜ್ಞಾನೋದಯವಾಯಿತು . ತಮ್ಮಲ್ಲೇ ಕ್ಷುಲ್ಲಕ ಕಾರಣಕ್ಕೆ ಜಗಳವಾಡುವುದರಿಂದ ಪರರಿಗೇ ಹೆಚ್ಚಿನ ಲಾಭ ಹೊರತು ತಮಗಲ್ಲ ಎಂಬ ಸತ್ಯದ ಅರಿವಾಯಿತು .

ಎರಡೂ ಸಿಂಹಗಳು ಒಟ್ಟಿಗೇ ನೀರನ್ನು ಕುಡಿದು ಅಲ್ಲಿಂದ ತೆರಳಿದವು .