Sunday, November 1, 2020

ಎಲೆಗಳಲ್ಲಿ ಯಾವ ಎಲೆ ಶ್ರೇಷ್ಠ ?

 ಇದು ಶ್ರೀ ಕೃಷ್ಣ ಮಠದಲ್ಲಿ ನಡೆದ ಉಪನ್ಯಾಸದಲ್ಲಿ ಕೇಳಿದ್ದು . ಬೇರೆ ಬೇರೆ ಎಲೆಗಳ ನಡುವೆ ತಮ್ಮಲ್ಲೇ ಯಾರು ಶ್ರೇಷ್ಠ ಎಂದು ವಾಗ್ವಾದ ನಡೆಯಿತು .

ಮೊದಲು ಬಾಳೆ ಎಲೆ ಮುಂದೆ ಬಂದು ಮಾತಾಡಿತು . ಅದು ತನ್ನ ಬಗ್ಗೆ     ಹೊಗಳಿ ಕ್ಕೊಳ್ಳುತ್ತಾ ಅಂದಿತು " ನಾನೇ ಶ್ರೇಷ್ಠ . ಮನುಷ್ಯರು ಊಟ ಮಾಡಲು ನಾನು ಬೇಕೇ ಬೇಕು . "


ಇದನ್ನು ಕೇಳಿ ವೀ ಲ್ಯದ ಎಲೆಗೆ ಸಿಟ್ಟು ಬಂತು . ಅದು ಹೇಳಿತು " ನಿನ್ನದೇನು ಶ್ರೇಷ್ಠತೆ ? ಊಟ ಆದ  ಮೇಲೆ ನಿನ್ನನ್ನು ತಿಪ್ಪೆಗೆ ಎಸೆಯುತ್ತಾರೆ . ಎಲೆಗಳಲ್ಲಿ ನಾನೇ ಶ್ರೇಷ್ಠ . ತಿಂದದ್ದು ಸರಿಯಾಗಿ ಜೀರ್ಣ ಆಗ ಲು ನಾನು ಬೇಕೇ ಬೇಕು . "


ಆಗ ಕರಿಬೇವಿನ ಎಲೆ ಹೇಳಿತು " ನಿನ್ನ ದೇನು ಶ್ರೇಷ್ಠತೆ ? ನಿನ್ನನ್ನು ತಿಂದ ಮೇಲೆ ಎಲ್ಲರೂ ಬಾಯಿ ಎಲ್ಲಾ ಕೆಂಪು ಮಾಡಿಕೊಂಡು ಎಲ್ಲೆಂದರಲ್ಲಿ ಉಗುಳುತ್ತಾ ಹೋಗುತ್ತಾರೆ . ನಾನೇ ಶ್ರೇಷ್ಠ. ಅಡಿಗೆಗೆ ಪರಿಮಳ ಬರುವುದು ನನ್ನಿಂದ . ನಾನು ಇಲ್ಲದೆ ಅಡಿಗೆ ರುಚಿ ಆಗುವುದಿಲ್ಲ . "


ಆಗ ಉಳಿದ ಎಲೆಗಳು ಕರಿಬೇವನ್ನು ಅಪಹಾಸ್ಯ ಮಾಡಿ ಹೇಳಿದವು " ನಿನ್ನ ದೇನೂ ಶ್ರೇಷ್ಠತೆ ಇಲ್ಲ . ಊಟ ಕ್ಕೆ ಪರಿಮಳ ಬರಬಹುದು . ಆದರೆ ಊಟ ದಲ್ಲಿ ನೀನು ಸಿಕ್ಕಿದ ಕೂಡಲೇ ಪಕ್ಕಕ್ಕೆ ಸರಿಸಿ ಇಡುತ್ತಾರೆ . "


ಆಗ ಅಷ್ಟು ಹೊತ್ತು ಸುಮ್ಮನೆ ಇದ್ದ ಒಂದು ಎಲೆ ಮಾತಾಡಿತು ." ನೀವೆಲ್ಲ ಅಹಂಕಾರದಲ್ಲಿ ನಾನೇ ಶ್ರೇಷ್ಠ ಎಂದು ವಾಗ್ವಾದ ಮಾಡುತ್ತಾ ಇದ್ದೀರಿ . ನಿಮ್ಮ ಬಾಳು ಕ್ಷಣಿಕ . ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ನಿಮ್ಮನ್ನು ಬಳಸುತ್ತಾರೆ . ಆಮೇಲೆ ನಿಮ್ಮ ಕಡೆ ತಿರುಗಿ ಯಾರೂ ನೋಡುವುದಿಲ್ಲ . ಆದರೆ ನಾನು ಹಾಗಲ್ಲ . ನನ್ನನ್ನು ಪವಿತ್ರ ಭಾವನೆ ಇಂದ ನೋಡುತ್ತಾರೆ . ದೇವರ ಕೋಣೆಯಲ್ಲಿ ನನಗೆ ವಿಶೇಷ ಸ್ಥಾನ ಇದೆ . ಆದರೆ ನಾನು ಮಾತ್ರ ಅಹಂಕಾರದಿಂದ ಮಾತಾಡುವುದಿಲ್ಲ . "



ಅದೇ ತುಳಸಿ ಎಲೆ .



No comments:

Post a Comment