Tuesday, November 21, 2023

Kids are always kids !!!!!

 This incident I am writing in Kannada. 

ನನ್ನ ಸೋದರಳಿಯ ಅನಿರುದ್ಧ ದಸರಾ ರಜೆಗೆ ನಮ್ಮ  ಮನೆಗೆ ಬಂದಿದ್ದ.. 


ಆಗ ಕ್ರಿಕೆಟ್ ವರ್ಲ್ಡ್ ಕಪ್ ಸಮರದ ಕಾಲ.


ನಾನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪಂದ್ಯವೊಂದನ್ನು ವೀಕ್ಷಣೆ ಮಾಡುತ್ತಿದ್ದೆ. 


ಆ ತಂಡದ ವೇಗಿ ಒಬ್ಬನ ಹೆಸರು jansen.


ನನ್ನ ತಿಳುವಳಿಕೆ ಪ್ರಕಾರ ಯಾವ ಇಂಗ್ಲಿಷ್ ಶಬ್ದಗಳು "j " ಯಿಂದ ಶುರುವಾಗುವುದೋ, ಅವೆಲ್ಲ ಕನ್ನಡದ " ಜ " ಅಕ್ಷರದ ಸಮಾನ ಶಬ್ದಗಳು.


ಅಂತೆಯೇ ನಾನು ಆ ವೇಗಿಯ ಹೆಸರನ್ನು ಜಾನ್ಸನ್ ಎಂದು ಹೇಳುತ್ತಿದ್ದೆ.


ಅನಿರುದ್ಧನಿಗೆ ಕ್ರಿಕೆಟ್ ಆಟದಲ್ಲಿ ತುಂಬಾ ಆಸಕ್ತಿ.


ಹೀಗೆ ಪಂದ್ಯದ ಬಗ್ಗೆ ಮಾತನಾಡುತ್ತಾ ನಾನು ವೇಗಿ jansen ಬಗ್ಗೆ ಹೇಳಿದೆ


ಆದರೆ ಅನಿರುದ್ಧ ಜಾನ್ಸೆನ್ ಅನ್ನುವ ವೇಗಿಯೇ ದಕ್ಷಿಣ ಆಫ್ರಿಕಾ ತಂಡದಲ್ಲಿ ಇಲ್ಲ ಎಂದು ವಾದಿಸಿದ.


ಆಗ ನಾನು ನಮ್ಮ ಮನೆಗೆ ಬರುವ ಕನ್ನಡ ದಿನ ಪತ್ರಿಕೆ ಯನ್ನು ತೆಗೆದು ತೋರಿಸಿದೆ.


ಅಲ್ಲೂ ಜಾನ್ಸನ್ ಎಂದೇ ಇತ್ತು.


ಅದನ್ನು ನೋಡಿದ ಅನಿರುದ್ಧ ಗಲಿಬಿಲಿ ಗೊಂಡ.


ಆನಂತರ ಆ ವೇಗಿಯ ಫೋಟೋ ನೋಡಿದೆವು 


ಅದನ್ನು ನೋಡುತ್ತಲೇ ಅನಿರುದ್ಧ ಹೇಳಿದ,


ಅವನು ಜಾನ್ಸನ್ ಅಲ್ಲ ,

ಯಾನ್ಸನ್ !!!!!


No comments:

Post a Comment