ನಮ್ಮೆಲ್ಲರ ಕೂದಲು ದಿನ ಕಳೆದಂತೆ ಬೆಳ್ಳಗಾಗುತ್ತದೆ.
ಆದರೆ ನೆತ್ತಿ ಮೇಲಿನ ಕೂದಲೇ ಮೊದಲು ಬೆಳ್ಳಗಾಗುತ್ತದೆ.
ಯಾಕೆ ??
1. ಕೂದಲಿಗೆ ಬಣ್ಣ ನೀಡುವ ಜೀವಕೋಶಗಳು ಕೂದಲಿನ ಬುಡದಲ್ಲಿರುತ್ತವೆ. ತಲೆಯ ಮಧ್ಯದಲ್ಲಿರುವ ಕೂದಲಿನ ಬುಡಗಳು ಬೇರೆ ಭಾಗಗಳಿಗಿಂತ ಮೊದಲು ಈ ಜೀವಕೋಷಗಳನ್ನು ಕಳೆದುಕೊಳ್ಳುತ್ತದೆ.
ಹೀಗಾಗಿ ಇಲ್ಲಿ ಕೂದಲು ಬೇಗ ಬಿಳಿಯಾಗುತ್ತದೆ.
2. ಸೂರ್ಯನ ಶಾಖ ಮತ್ತು UV ಕಿರಣಗಳು ತಲೆಯ ಮಧ್ಯ ಭಾಗವನ್ನು ನೇರವಾಗಿ ಸ್ಪರ್ಶಿಸುತ್ತದೆ. ಅತಿಯಾದ ಬಿಸಿಲಿನಿಂದ ಕೂದಲಿನ ಪ್ರೊಟೀನ್ ಮತ್ತು ಬಣ್ಣ ನಷ್ಟವಾಗುತ್ತದೆ.
3. ತಲೆಯ ಮಧ್ಯ ಭಾಗಕ್ಕೆ ರಕ್ತ ಸಂಚಾರ ಸ್ವಲ್ಪ ನಿಧಾನವಾಗಿ ಆಗುವುದರಿಂದ ಕೂದಲು ಬೇಗ ಬಿಳಿಯಾಗುತ್ತದೆ.
4. ನಮ್ಮ genetics ಕೂಡ ಕಾರಣ.
5. ಅತಿಯಾದ ಒತ್ತಡದಿಂದ ತಲೆ ಮೇಲಿನ ಸೂಕ್ಷ್ಮ ಜೀವಕೋಶಗಳು ಘಾಸಿಗೊಳಗಾಗಿ ಕೂದಲು ಬಿಳಿಯಾಗುತ್ತದೆ.
6. ಹಾರ್ಮೋನ್ ಅಸಮತೋಲನವೂ ಒಂದು ಕಾರಣ.