ಬೇಕಾಗುವ ಸಾಮಗ್ರಿಗಳು
ತೆಂಗಿನಕಾಯಿ ತುರಿ 1/2 ಕಪ್
ಹುರಿಗಡಲೆ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ 2 ಪೀಸ್
ಶುಂಠಿ 1/2 ಇಂಚು
ಜೀರಿಗೆ 1/2 ಟೀಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ಉಪ್ಪು
ಮಾಡುವ ವಿಧಾನ
ಮೊದಲಿಗೆ ಮಿಕ್ಸಿ ಜಾರಿಗೆ ಮೇಲೆ ಹೇಳಿದ ಎಲ್ಲಾ ಪದಾರ್ಥ ಗಳನ್ನು ಹಾಕಿ ನೀರು ಹಾಕದೆ ರುಬ್ಬಬೇಕು.
ಹೀಗೆ ಅರ್ಧ ಗ್ರೈಂಡ್ ಆದ ನಂತರ ಖಾರಕ್ಕೆ 3 ರಿಂದ 4 ಹಸಿಮೆಣಸಿನಕಾಯಿ ಹಾಕಿ.
ಈಗ 1 ಕಪ್ ನೀರು ಸೇರಿಸಿ ಮತ್ತೆ ತರಿ ತರಿಯಾಗಿ ರುಬ್ಬಬೇಕು.
ಕೊನೆಗೆ ಬೇಕಿದ್ದರೆ ಒಗ್ಗರಣೆ ಕೊಡಬಹುದು.
ಈಗ ತೆಂಗಿನಕಾಯಿ ಚಟ್ನಿ ರೆಡಿ !!!!
No comments:
Post a Comment