A Kannada idiom meaning
ಕನ್ನಡ ಗಾದೆ ----------
ನವಿಲನ್ನು ನೋಡಿ ಕೆಂಬೂತ ಗರಿ ಬಿಚ್ಚಿ ಕುಣಿಯಿತಂತೆ
ಕೆಂಬೂತ (ತುಳು - ಕುಪ್ಪಳ ) ಇದು ಸಾಮಾನ್ಯವಾಗಿ ಎಲ್ಲ ಕಡೆ ಕಾಣುವ ಪಕ್ಷಿ. ಕೆಂಬೂತ ಈ ಪಕ್ಷಿ ಸಾಮಾನ್ಯವಾಗಿ ಹೆಚ್ಚು ದೂರ ಹಾರುವುದಿಲ್ಲ . ಕೆಂಪು ಮತ್ತು ಕಪ್ಪು ಮಿಶ್ರಿತ ದೇಹ ಬಣ್ಣವನ್ನು ಹೊಂದಿದೆ .
ಇದಕ್ಕೂ ಉದ್ದನೆಯ ಬಾಲ ಇದೆ. ಕೆಂಬೂತ ಕೂಡ ತನ್ನ ಬಾಲದ ಗರಿಯನ್ನು ಒಂದು ಪ್ರಮಾಣದಲ್ಲಿ ಬಿಚ್ಚಬಲ್ಲದು. ಆದರೆ ನವಿಲಿನಂತೆ ಇದರ ಬಾಲ ಆಕರ್ಷಕ ವಾಗಿಲ್ಲ .
ಕೆಂಬೂತಕ್ಕೆ ನವಿಲಿನಂತೆ ತನ್ನ ಬಾಲವನ್ನು ಬಿಚ್ಚಿ ಕುಣಿಯುವ ಆಸೆ ಇರಬಹುದು . ಆದರೆ ಅದರ ಕುಣಿತವನ್ನು ಯಾರೂ ಇಷ್ಟ ಪಟ್ಟ ಹಾಗಿಲ್ಲ .ನವಿಲಿನ ನಾಟ್ಯಕ್ಕೆ ಇದು ಯಾವತ್ತೂ ಸಾಟಿ ಆಗಲು ಸಾಧ್ಯವಿಲ್ಲ.
ಇನ್ನೊಬ್ಬರ ಬಳಿ ಇರುವ ವಸ್ತುಗಳನ್ನು ನೋಡಿ ಅಸೂಯೆಯಿಂದ ತಾವೂ ಹೊಂದುವ ಆಸೆ ಇರುವವರಿಗೆ ಈ ಮಾತು ಹೇಳಲಾಗುತ್ತದೆ