Friday, June 22, 2012

ಗುಂಡನ ಫಜೀತಿ

                                    ಗುಂಡನ  ಫಜೀತಿ 


ಅದು ಮಳೆಗಾಲದ ಒಂದು ಸಂಜೆ. ಗುಂಡ, ಬಿಸಿಲು ಕಾಯುತ್ತಿದೆ ಎಂದು ಮನೆಯಿಂದ ಹೊರಬಿದ್ದ. ಅವನಿಗೂ ಮನೆಯಲ್ಲೇ ಕುಳಿತು ಬೇಸರವಾಗಿತ್ತು. ಇಡೀ  ದಿನ ಮಳೆ. ಹಗಲು ಮಾತ್ರವಲ್ಲ ರಾತ್ರಿಯೂ ಕೂಡ. ಗುಂಡ ಹೊರಗೆ ಕಾಲಿಡದೆ ತುಂಬಾ ದಿನಗಳೇ ಆಗಿತ್ತು. ಆದರೆ ಇವತ್ತು ಬಿಸಿಲು ಬಂದಿದೆ.
ಗುಂಡನಿಗೆ ಸಂತೋಷ ತಡೆಯಲು ಆಗಲಿಲ್ಲ. ಬೇರೆಯವರ ಮನೆಗೆ ವಿಸಿಟ್ ನೀಡಲೂ ಇದು ಒಳ್ಳೇ  ಸಮಯ. ಹೀಗೆ  ಯೋಚನೆ  ಬಂದದ್ದೇ ತಡ, ಗುಂಡ ಮನೆಯಿಂದ ಹೊರಬಿದ್ದ.
ಮಳೆಗೆ ಆಗ ತಾನೇ ನೆನೆದ ಮಣ್ಣು ನಯವಾಗಿತ್ತು. ಗುಂಡ ಕಾಲಿಟ್ಟ ಕಡೆ ಎಲ್ಲಾ ಕೆಸರು ಆತನ ಕಾಲಿಗೆ ಅಂಟಿಕೊಳ್ಳುತ್ತಿತ್ತು. ಗುಂಡ ಇದಾವೂದರ ಬಗ್ಗೆಯೂ ಯೋಚಿಸದೆ ಮುಂದಡಿ ಇಟ್ಟ .
ಪಕ್ಕದ ಮನೆಗೆ ಹೋಗಿ ಅವರ ಬಳಿ ಕುಡಿಯಲು ಹಾಲು ಕೇಳುವುದು ಆತನ ವಿಚಾರವಾಗಿತ್ತು. ಪಕ್ಕದ ಮನೆಗೆ ಇನ್ನೇನು ತಲುಪಿ , ಅವರನ್ನು ಕರೆಯಬೇಕು ಅನ್ನುವಷ್ಟರಲ್ಲಿ ಮಳೆರಾಯ ಬಂದೇಬಿಟ್ಟ.
ಗುಂಡನಿಗೆ ಫಜೀತಿಯೋ  ಫಜೀತಿ. ಇನ್ನೂ ಆತ ಅಂಗಳದಲ್ಲೇ ಇದ್ದಾನೆ.ತಲೆಯ ಮೇಲೆ ಆಗಲೇ 2 ಹನಿ ಬಿದ್ದಾಗಿದೆ. ಮನೆಯವರು ಬಾಗಿಲು ತೆಗೆಯುವ ಸೂಚನೆ ಕಾಣುತ್ತಿಲ್ಲ. ಗುಂಡ ತನ್ನ ಶಕ್ತಿ ಮೀರಿ ಕೂಗು ಹಾಕಿದ.
ಆಗ ಬಾಗಿಲು ತೆಗೆಯಿತು . ಮನೆಯಲ್ಲಿ ಇದ್ದವರೆಲ್ಲಾ ಹೊರಗೆ ಬಂದರು. ಆದರೇನು ಮಾಡುವುದು, ಗುಂಡ
ಒದ್ದೆ . ಆಗ ಎದುರಿಗೆ ಮನೆ ಯಜಮಾನನ ಸ್ಕೂಟರ್ ಕಾಣಿಸಿತು.
ಅದಕ್ಕೆ ಕವರ್ ಹಾಕಿದ್ದರು.ಮಳೆ ನೀರು ಒಳಗೆ ಬರದಂತೆ.ಬದುಕಿದೆಯ ಬಡ ಜೀವ ಎಂಬಂತೆ ಗುಂಡ ಸ್ಕೂಟರ್ ಹತ್ತಿ  ಒಳ ನುಸುಳಿದ. ಮಳೆ ನೀರು ಈಗ ಆತನ ಮೇಲೆ ಬೀಳುತ್ತಿಲ್ಲ. ಆತನ ಕಿವಿಗೆ ನಗೆಯ ಸದ್ದು ಕೇಳಿಸಿತು. ಆತನಿಗೆ ತಿಳಿಯಿತು ತನ್ನ ಫಜೀತಿ ನೋಡಿ ಮನೆಯವರು ನಗುತ್ತಿದ್ದಾರೆ ಎಂದು. ಆದರೇನು ಮಾಡಲು ಸಾಧ್ಯ ಆತನ ಪರಿಸ್ಥಿತಿ ಹಾಗಿದೆ.

ಗುಂಡ - ಪಕ್ಕದ ಮನೆಯ ಗಂಡು ಬೆಕ್ಕು
ಗುಂಡನ ಪಕ್ಕದ ಮನೆಯ ಜನ- ನಾವು.

ಗುಂಡ ಇವತ್ತು ಹೊರಗೆ ಬಂದಿಲ್ಲ !







No comments:

Post a Comment