Friday, November 1, 2013

ಅವಲಕ್ಕಿ ಉಪ್ಕರಿ ಮಾಡುವ ವಿಧಾನ

                             ಅವಲಕ್ಕಿ ಉಪ್ಕರಿ ಮಾಡುವ ವಿಧಾನ 

ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಫೇವರಿಟ್ ತಿಂಡಿ . ಇದು ಮಾಡಲು ಸುಲಭ ಏಕೆಂದೆರೆ ಇದನ್ನು ನಾನೂ ಮಾಡಬಲ್ಲೆ !ಇವತ್ತು ಬೆಳಗ್ಗೆಯ ಉಪಹಾರಕ್ಕೆ ನಮ್ಮ ಮನೆಯಲ್ಲಿ ಇದೇ ಮಾಡಿದ್ದೇವೆ  .

ಬೇಕಾಗುವ ಸಾಮಗ್ರಿಗಳು -----

ಪೇಪರ್ ಅವಲಕ್ಕಿ  --  ನಮ್ಮ ಹಸಿವಿನ ಅಂದಾಜಿನ ಮೇರೆಗೆ !
ತೆಂಗಿನ ಕಾಯಿ ತುರಿ  --- ಹೆಚ್ಚು ಹಾಕಿದಷ್ಟು ರುಚಿ ಜಾಸ್ತಿ
ಸಕ್ಕರೆ ಮತ್ತು ಉಪ್ಪು  --- ರುಚಿಗೆ ತಕ್ಕಷ್ಟು
ನೀರುಳ್ಳಿ  -- ಸಣ್ಣದಾಗಿ ಹೆಚ್ಚಿದ್ದು -- ೨
ಹಸಿ ಮೆಣಸಿನ ಕಾಯಿ --  ಸಣ್ಣ ತುಂಡುಗಳಾಗಿ ಮಾಡಿದ್ದು - ಸ್ವಲ್ಪ
ನಿಂಬೆ ರಸ  --- ಸ್ವಲ್ಪ
ಮಾಮೂಲು ಒಗ್ಗರಣೆ

ಮಾಡುವ ವಿಧಾನ 

ಮೊದಲಿಗೆ ಪಾತ್ರೆಯಲ್ಲಿ ಅವಲಕ್ಕಿ ಮತ್ತು ತೆಂಗಿನಕಾಯಿ ತುರಿ ಹಾಕಿ ಚೆನ್ನಾಗಿ ಕಲಸಬೇಕು . ಇದನ್ನು ೫ ನಿಮಿಷಗಳ ಕಾಲ ಹಾಗೆ ಬಿಡಬೇಕು .
ನಂತರ ಇದಕ್ಕೆ ನೀರುಳ್ಳಿ ತುಂಡುಗಳು , ಹಸಿ ಮೆಣಸಿನ ಕಾಯಿಯ ತುಂಡುಗಳು , ಸಕ್ಕರೆ  ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು . ಖಾರ ಬೇಕಾದವರು ಸಕ್ಕರೆ ಹಾಕಬೇಕಾಗಿಲ್ಲ .
ಕೊನೆಗೆ ನಿಂಬೆ ರಸ ಮತ್ತು ಒಗ್ಗರಣೆ ಹಾಕಿ ಸವಿಯಬಹುದು.