Saturday, July 12, 2014

ಮುಸಲಧಾರೆ ಮಳೆ ಮತ್ತು ಕುಂಭ ದ್ರೋಣ ಮಳೆ

ಇವತ್ತಿನ ಪೇಪರಿನಲ್ಲಿ ಮುಂಬೈ ನಲ್ಲಿ ಕುಂಭ ದ್ರೋಣ ಮಳೆ ಯ ಬಗ್ಗೆ ನ್ಯೂಸ್ ಇತ್ತು .  ಈ ಶಬ್ದಗಳ ಅರ್ಥ ನನಗೆ ತಿಳಿದಂತೆ ಈ ಕೆಳಗಿನಂತಿದೆ ---

ಮುಸಲ ಧಾರೆ ಮಳೆ  ----

ಸಂಸ್ಕೃತ ದಲ್ಲಿ ಮುಸಲ ಎಂದರೆ ಒನಕೆ . ಮುಸಲ ಧಾರೆ ಎಂದರೆ ಒನಕೆ ಯಷ್ಟು ದಪ್ಪನಾದ ಮಳೆಯ ಹನಿ ಗಳು .   ಇದು ಅತಿಶಯೋಕ್ತಿ ಅನಿಸಿದರೂ , ದಪ್ಪನಾದ ಮಳೆಯ ಹನಿಗಳಿಗೆ ಇದು ಸೂಕ್ತವಾದ ಪದ .


ಕುಂಭ ದ್ರೋಣ ಮಳೆ ----

ಸಂಸ್ಕೃತದಲ್ಲಿ ಕುಂಭ ಎಂದರೆ ಮಡಕೆ . ಒಂದು  ನೀರು ತುಂಬಿದ ಮಡಕೆಯಿಂದ ನಾವು  ನೀರನ್ನು ಕೆಳಗೆ ಚೆಲ್ಲಿದಾಗ  ಅದು ಯಾವ ರಭಸದಿಂದ ಕೆಳಗೆ ಚೆಲ್ಲುತ್ತದೆಯೋ , ಅದೇ ರೀತಿ " ಧೋ " ಎಂದು ಸುರಿಯುವ ಮಳೆಗೆ ಈ ಹೆಸರು . ಕರಾವಳಿ ಯಲ್ಲೂ ಈಗ ಇಂತಹುದೇ ಮಳೆ .