ನಾನಿರುವ ಊರು ಕರ್ನಾಟಕದ ಕರಾವಳಿಯ ಉಡುಪಿ . ಎಲ್ಲರೂ ತಿಳಿದಿರುವಂತೆ ಕೇನ್ ಚಂಡಮಾರುತದ ಆರ್ಭಟ ಇಲ್ಲಿ ಸ್ವಲ್ಪ ಜೋರಾಗಿಯೇ ಇತ್ತು .
ಯಾವತ್ತೂ ಈ ಸಮಯದಲ್ಲಿ ಮಳೆ ಬಿಡುವು ಕೊಡುತ್ತದೆ . ಆದರೆ ಈ ಸಲ ಮಳೆಗಾಲವನ್ನು ನೆನಪಿಸುವ ಮಳೆ ಕಾಣಸಿಕ್ಕಿತು .
ನನ್ನ ಊರಿನಲ್ಲಿ ಇರುವುದು ಎರಡೇ ಕಾಲ . ಒಂದು ಮಳೆಗಾಲ , ಇನ್ನೊಂದು ಬೇಸಿಗೆ ಕಾಲ . ಆದರೆ ಚಂಡಮಾರುತದ ಪ್ರಭಾವದಿಂದ ಇಡೀ ದಿನ ಚುಮು ಚುಮು ಚಳಿಯ ಅನುಭವ ಆಯಿತು .
ನಾನು ಪ್ರತಿದಿನ ಯಾವಾಗಲೂ ತಣ್ಣೀರಿನಲ್ಲಿ ಸ್ನಾನ ಮಾಡುವುದು . ಇಷ್ಟಾದರೂ ಬರಿಯ ೫ ನಿಮಿಷದಲ್ಲಿ ಬೆವರು ಒಸರಲು ಶುರು .
ಆದರೆ ಈ ಸಲ ಹಾಗಾಗಲಿಲ್ಲ . ಚಳಿಯ ಅನುಭವ ಚೆನ್ನಾಗಿಯೇ ಆಯಿತು . ರಾತ್ರಿ ವೇಳೆ ಮಲಗುವಾಗ ಯಾವ ಮೇಲು ಹೊದಿಕೆಯನ್ನು ಹೊದ್ದುಕೊಳ್ಳದ ನಾನು ಕಳೆದ ಎರಡು ದಿನಗಳಿಂದ ಕಂಬಳಿ ಹೊದ್ದುಕೊಳ್ಳುತ್ತಿದ್ದೇನೆ .
ಆದರೆ ಇನ್ನು ಇವುಗಳ ಅಗತ್ಯ ನಮಗಿಲ್ಲ. ಏಕೆಂದರೆ ಚಂಡಮಾರುತವು ಓಮನ್ ದೇಶದ ಕಡೆ ಹೋಗಿದೆ . ಇಲ್ಲಿ ಮತ್ತೆ ಬಿಸಿಲಿನ ಝಳ ಶುರುವಾಗಿದೆ .
ಮಳೆ ನಿಂತು ಹೋದ ಮೇಲೆ ಸೆಖೆಯು ಶುರುವಾಗಿದೆ ......