Tuesday, April 6, 2021

ಈರುಳ್ಳಿ ತಂಬುಳಿ ಮಾಡುವ ವಿಧಾನ

ತುಂಬಾ ಸುಲಭವಾಗಿ ಮಾಡುವ ವಿಧಾನ.



ಬೇಕಾಗುವ ಸಾಮಗ್ರಿಗಳು


ಈರುಳ್ಳಿ - ೧
ಜೀರಿಗೆ - ೧ ಚಮಚ
ಕೆಂಪು ಮೆಣಸು - ೧
ತೆಂಗಿನ ತುರಿ - ೧ ಕಪ್


ಮಾಡುವ ವಿಧಾನ

ಮೊದಲು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಬೇಕು . ನಂತರ ಅದನ್ನು ಜೀರಿಗೆ ಮತ್ತು ಮೆಣ ಸಿ ನೊಂದಿಗೆ ತುಪ್ಪದಲ್ಲಿ ಹುರಿಯಬೇಕು . ನಂತರ ತುರಿದ ತೆಂಗಿನಕಾಯಿ ತುರಿ ಜೊತೆ ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು .

ನಂತರ ಇದನ್ನು ಮಜ್ಜಿಗೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೆರೆಸಬೇಕು .

ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ ಮುಗಿಯಿತು .

No comments:

Post a Comment