Sunday, March 23, 2025

ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ

 ಇದನ್ನು   ಅಡುಗೆ ಕಾರ್ಯಕ್ರಮ ದಲ್ಲಿ ನೋಡಿದೆ.



ಬೇಕಾಗುವ  ಸಾಮಗ್ರಿಗಳು 


ತೆಂಗಿನಕಾಯಿ ತುರಿ    1/2  ಕಪ್ 

ಹುರಿಗಡಲೆ      1/2  ಕಪ್ 

ಬೆಳ್ಳುಳ್ಳಿ   4-5  ಎಸಳು 

ಹಸಿಮೆಣಸಿನಕಾಯಿ  2  ಖಾರಕ್ಕೆ 

ಹಸಿ ಶುಂಠಿ  ಚಿಕ್ಕ ತುಂಡು 

ಹುಣಸೆಹಣ್ಣು  ಸ್ವಲ್ಪ

ಉಪ್ಪು  ರುಚಿಗೆ 

ಕೊತ್ತಂಬರಿ ಸೊಪ್ಪು ಸ್ವಲ್ಪ 




ಮಾಡುವ ವಿಧಾನ 


ಒಂದು ಮಿಕ್ಸಿ ಜಾರಿಗೆ  ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ.

ಇದಕ್ಕೆ ಸ್ವಲ್ಪ ನೀರು ಹಾಕಿ ಎಷ್ಟು ನುಣ್ಣಗೆ ಬೇಕೋ ಅದರಂತೆ ರುಬ್ಬಬೇಕು.

ಇದಕ್ಕೆ ಒಗ್ಗರಣೆಯ ಅಗತ್ಯವಿಲ್ಲ.

ಬೇಕೆಂದವರು ಸ್ವಲ್ಪ ಸಾಸಿವೆ, ಉದ್ದಿನಬೇಳೆ, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಕೊಡಬಹುದು.

No comments:

Post a Comment