ನನ್ನ ಮನೆಯಲ್ಲಿ ದೀಪಾವಳಿ ಯ ಸಡಗರ
ಪಕ್ಕದ ಮನೆಯವನು ಬಿಡುವ ಪಟಾಕಿಗಳ ಅಬ್ಬರ
ರಾತ್ರಿಯ ಆಕಾಶದಲ್ಲಿ ಬಣ್ಣ ಬಣ್ಣದ ಬೆಳಕಿನ ಚಿತ್ತಾರ
ರಾತ್ರಿ ಬರುವ ಮಳೆಯಿಂದಾಗಿ ಉಂಟಾಗಿದೆ ಬೇಸರ
ಮಳೆಗಾಲದ ಮಳೆ ಇನ್ನೂ ನಿಂತಿಲ್ಲ
ರಾತ್ರಿಗೆ ಪಟಾಕಿ ಬಿಡಲು ಬಿಡುತ್ತಿಲ್ಲ !!!
ಪ್ರಕೃತಿಯೂ ಆಚರಿಸುತ್ತಿದೆ ದೀಪಾವಳಿ
ಸಂಜೆ ಆಗುತ್ತಿದ್ದಂತೆ ಶುರು ಗುಡುಗು - ಮಿಂಚಿನ ಹಾವಳಿ !!!!
No comments:
Post a Comment