Wednesday, August 13, 2014

ಕಾಯಿ ಚಟ್ನಿ ಮಾಡುವ ವಿಧಾನ

ಇದನ್ನು ನನ್ನ ತಾಯಿ ಜೊತೆ ಟಿ . ವಿ . ಯಲ್ಲಿ ನೋಡಿದೆ .

ಬೇಕಾಗುವ ಸಾಮಗ್ರಿಗಳು 

ಹಸಿ ತೆಂಗಿನ ಕಾಯಿ ತುರಿ
ಶುಂಟಿ
ಹಸಿ ಮೆಣಸಿನ ಕಾಯಿ
ಹುಣಸೆ ಹಣ್ಣಿನ ರಸ
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ 

ಮೊದಲಿಗೆ ಮಿಕ್ಸಿ ಜಾರಿಗೆ ಕಾಯಿ ತುರಿ , ಶುಂಟಿ , ಹಸಿ ಮೆಣಸಿನ ಕಾಯಿ , ಸ್ವಲ್ಪ ಹುಣಸೆ ಹಣ್ಣಿನ ರಸ , ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಮ್ಮೆ ರುಬ್ಬಿಕೊಳ್ಳಬೇಕು  . ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಇನ್ನೊಂದು ಸಲ ರುಬ್ಬಿಕೊಳ್ಳಬೇಕು  . ಈಗ ಕಾಯಿ ಚಟ್ನಿ ಸವಿಯಲು ಸಿದ್ಧ .