Wednesday, August 20, 2014

ನಾನಾಡುವ ತುಳು ಭಾಷೆ

                                                  ನಾನಾಡುವ ತುಳು ಭಾಷೆ 

ನನ್ನ ಮಾತೃ ಭಾಷೆ ತುಳು . ತುಳುವನ್ನು ನಾವಿಲ್ಲಿ ಸಂವಹನದ ಮಾಧ್ಯಮವನ್ನಾಗಿ ಬಳಸುತ್ತೇವೆ . ತುಳುವರಲ್ಲಿ ವಿಭಿನ್ನ ಪಂಗಡಗಳಿವೆ . ಅಂತೆಯೇ ಅವರಾಡುವ ತುಳುವೂ ವಿಭಿನ್ನ .

ನಾನು ಮಾತನಾಡುವ ತುಳು ಇಲ್ಲಿ ಪ್ರಚಲಿತದಲ್ಲಿರುವ ( ಹೆಚ್ಚಿನ ಜನರು ಉಪಯೋಗಿಸುವ ) ತುಳುವಿಗಿಂತ ಉಚ್ಚಾರಣೆಯಲ್ಲಿ ಭಿನ್ನ . ಆದರೂ ಶಬ್ದಗಳ ಅರ್ಥ ಒಂದೇ .

ಹೆಚ್ಚಿನ ಶಬ್ದಗಳು ಒಂದೇ ಆಗಿವೆ . ಆದರೂ ಕೆಲವು ನಾವಾಡುವ ಶಬ್ದಗಳಿಗೂ , ಇತರರು ಹೇಳುವ ಶಬ್ದಗಳಿಗೂ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದು .

ನಾನಾಡುವ ತುಳುವಿನಲ್ಲಿ ಸಂಸ್ಕೃತ ಶಬ್ದಗಳ ಬಳಕೆ ಹೆಚ್ಚು . ಇದರಿಂದಾಗಿ ನಾನಾಡುವ ತುಳು ಒಂದು ಸಮುದಾಯದ ಸೀಮಿತ ಭಾಷೆಯಾಗಿ ಉಳಿದು ಹೋಗಿದೆ .

ಆದರೂ ಇತರರು ಆಡುವ ತುಳುವಿನ ಅರ್ಥ ಗ್ರಹಿಸಬಲ್ಲೆ . ಅಂತೆಯೇ ಮಾತನಾಡಲೂ !