Monday, August 5, 2024

ಶ್ರಾವಣ ಮಾಸ ದಲ್ಲೇಕೆ ನಾನ್ ವೆಜ್ ತಿನ್ನಬಾರದು ???

 ಇವತ್ತಿಂದ ಶ್ರಾವಣ ಮಾಸ ಆರಂಭ.


ಶ್ರಾವಣ ಮಾಸ ಹಬ್ಬಗಳ ಮಾಸ. ಈ ಮಾಸದಲ್ಲಿ  ಮನೆಯ ಹಿರಿಯರು ನಾನ್ ವೆಜ್ ತಿನ್ನಬಾರದು ಎಂದು ಹೇಳುತ್ತಾರೆ.  ಏಕೆ ???


ಶ್ರಾವಣ ಮಾಸದಲ್ಲಿ ಮಾಂಸಾ ಹಾರ ಸೇವಿಸಿದರೆ ದೇವರ ಪೂಜೆಗೆ ಅಶುದ್ದಿ ಆಗುತ್ತದೆ ಎಂಬುದು ನಮ್ಮೆಲ್ಲರ ನಂಬಿಕೆ.


ಆದರೆ ಇದು ವೈಜ್ಞಾನಿಕವಾಗಿಯೂ ಸತ್ಯ  !!!!


ಶ್ರಾವಣ ಮಾಸದಲ್ಲಿ ಮಳೆಯೂ ಬರುತ್ತಿರುತ್ತದೆ.  ಅಂದರೆ ಬಿಸಿಲಿನ ಅಭಾವ. ಹೆಚ್ಚು ಬೆಳಕಿರುವುದಿಲ್ಲ.


ಹೀಗಾಗಿ ನಮ್ಮ ದೇಹದಲ್ಲಿ ಜೀರ್ಣ ಕ್ರಿಯೆ ಹೆಚ್ಚು ಚುರುಕಾಗಿ ಇರುವುದಿಲ್ಲ.


ಇದರಿಂದ ಮಾಂಸ ದಂತಹ ಕಠಿಣ ಪದಾರ್ಥ ವನ್ನು ದೇಹ ಜೀರ್ಣಸಿಕೊಳ್ಳುವುದು ಕಷ್ಟ.


ಆದ್ದರಿಂದ ಮಾಂಸ ತಿನ್ನುವುದಿಲ್ಲ.


ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗಿರುತ್ತದೆ.  ಇದೇ  ನೀರಿನ ಮೇಲೆ ಅವಲಂಬಿತ ಆಗಿರುವ ಎಷ್ಟೋ ಜೀವಿಗಳಿಗೂ ವಿವಿಧ ರೀತಿಯ ಖಾಯಿಲೆ ಗಳು  ಇರಬಹುದು.


ಮಳೆಗಾಲ ಎನ್ನುವುದು ಮೀನುಗಳ ಸಂತಾನೋತ್ಪತ್ತಿ ಕಾಲ.   ಈ ಸಮಯದಲ್ಲಿ ಮನುಷ್ಯ ಮೀನು ಹಿಡಿದು ತಿಂದರೆ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ.


ಇದರಿಂದ ಸೃಷ್ಟಿಯ ಲಯ ತಪ್ಪಬಹುದು 


ಆದ್ದರಿಂದ ಈ ಸಂದರ್ಭದಲ್ಲಿ ಮೀನು ಮತ್ತು ಮಾಂಸ ಸೇವಿಸುವುದಿಲ್ಲ.

No comments:

Post a Comment