ಒಲಿಪಿಂಕ್ ಕ್ರೀಡೆಗಳು ಈಗಷ್ಟೇ ಮುಗಿದಿವೆ . ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟು ಗಳು ತಾವು ಗೆದ್ದ ಪದಕಕ್ಕೆ ಮುತ್ತಿಟ್ಟು ಪದಕವನ್ನು ಕಚ್ಚುತ್ತಾರೆ.
ಏಕೆ ???
ಇದು ಶತಮಾನಗಳಿಂದ ಬಂದ ಒಂದು ಅಭ್ಯಾಸ ಆಗಿದೆ.
ಶತಮಾನಗಳಷ್ಟು ಹಿಂದೆ ಕ್ರೀಡೆಯಲ್ಲಿ ವಿಜೇತ ರಾದವರಿಗೆ ಶುದ್ಧ ಚಿನ್ನ ಅಂದರೆ 24 ಕ್ಯಾರೆಟ್ ಚಿನ್ನದಿಂದ ಮಾಡಿದ ಪದಕವನ್ನು ನೀಡುತ್ತಿದ್ದರು.
24 ಕ್ಯಾರೆಟ್ ಚಿನ್ನ ತುಂಬಾ ಮೃದು.. ಅದರ ಶುದ್ಧತೆಯನ್ನು ಪರೀಕ್ಷಿಸಲು ಮತ್ತು ಅದು ತಮ್ಮದೇ ಎಂದು ಹಕ್ಕು ಸಾಧಿಸಲು ಪದಕವನ್ನು ಕಚ್ಚಿ ತಮ್ಮ ಹಲ್ಲಿನ ಅಚ್ಚು ಮೂಡಿಸುತ್ತಿದ್ದರು.
ಆದರೆ ಈಗ ಶುದ್ಧ ಚಿನ್ನದ ಪದಕಗಳು ಲಭ್ಯವಿಲ್ಲ.
ಆದರೆ ಪದಕ ಕಚ್ಚುವ ಅಭ್ಯಾಸ ಮಾತ್ರ ಮುಂದುವರಿದಿದೆ !!!!
No comments:
Post a Comment