ಬೆಳೆವ ಸಿರಿ ಮೊಳಕೆಯಲ್ಲಿ
ಇದು ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಘಟನೆ.ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ.ಅವರು ಒಮ್ಮೆ ಮಲಗಿದ್ದಾಗ ಶಿವನು ಅವರ ಕನಸಿನಲ್ಲಿ ಬಂದು ತಾನು ಅವಳಲ್ಲಿ ಜನ್ಮ ತಾಳುವುದಾಗಿ ತಿಳಿಸಿದನಂತೆ.ಆಗಲೇ ವಿವೇಕಾನಂದರ ಜನ್ಮವಾಯಿತು.ಆದರೆ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರನಾಥ ದತ್ತ.ಬಾಲಕ ನರೇಂದ್ರನು ತುಂಬಾ ತುಂಟ.ಇದರಿಂದಾಗಿ ಅವನ ತಾಯಿಗೆ ಸಾಕೋ-ಸಾಕಾಗಿ ಹೋಗುತ್ತಿತ್ತು.
ಒಮ್ಮೆ ನರೇಂದ್ರನು ತನ್ನ ಓರಿಗೆಯ ಗೆಳೆಯರ ಜೊತೆ ಆಟವಾಡುತ್ತಿದ್ದಾಗ ಅವನಿಗೆ ತಾನು ತಪಸ್ಸಿನ ಆಟ ಆಡಿದರೆ ಹೇಗೆ?ಎಂಬ ಯೋಚನೆ ಬಂತು.ಅಂತೆಯೇ ಬಾಲಕರು ತಪಸ್ಸಿನ ಆಟ ಆಡಲು ಪ್ರಾರಂಭಿಸಿದರು.ಹೀಗಿರುವಾಗ ಬಾಲಕ ನರೇಂದ್ರನು ಸಮಾಧಿ ಸ್ಥಿತಿಗೆ ತಲುಪಿದನು.ಆತನಿಗೆ ಇಹದ ಪರಿವೆಯೇ ಇಲ್ಲವಾಯ್ತು.
ಆದರೆ ಆತನ ಗೆಳೆಯನಲ್ಲೊಬ್ಬ ಆಗಿಂದಾಗ್ಗೆ ಕಣ್ಣು ತೆರೆದು ಉಳಿದವರು ಏನು ಮಾಡುತ್ತಿದ್ದಾರೆಂದು ನೋಡುತ್ತಿದ್ದ.ಹಾಗೆಯೇ ಆತನ ದೃಷ್ಟಿ ನರೇಂದ್ರನ ಕಡೆಗೆ ಹರಿಯಿತು.ಆಗ ಅವನಿಗೆ ನರೇಂದ್ರನ ಮುಂದೆ ಒಂದು ಹಾವು ಹೆಡೆ ಬಿಚ್ಚಿ ಕುಳಿತಿರುವುದು ಕಂಡಿತು.ಎದ್ದೆನೋ,ಬಿದ್ದೆನೋ ಎಂಬಂತೆ ಆತ ಓಡಿ ನರೇಂದ್ರನ ಪಾಲಕರನ್ನು ಮತ್ತು ಊರ ಹಿರಿಯರನ್ನು ಅಲ್ಲಿಗೆ ಕರೆತಂದ.ಜನರು ಸೇರಿದುದನ್ನು ಕಂಡ ಹಾವು ಹೆಡೆ ಕೆಳಗಿಳಿಸಿ ಸುಮ್ಮನೆ ಸರಿದು ಹೋಯಿತು.
ಆಗ ಊರ ಹಿರಿಯರು ನರೇಂದ್ರನ ಪಾಲಕರ ಬಳಿ ನಿಮ್ಮ ಮಗ ಸಾಮಾನ್ಯನಲ್ಲ.ಸಾಕ್ಷಾತ್ ನಾಗದೇವರೇ ಬಂದು ಆತನಿಗೆ ಆಶೀರ್ವಾದ ಮಾಡಿದ್ದಾರೆ.ಆಟ ಜೀವನದಲ್ಲಿ ಬಹಳ ಮುಂದೆ ಬರುತ್ತಾನೆ ಎಂದು ಹೇಳಿದರು.ಅಂತೆಯೇ ಆಯಿತು.ಸ್ವಾಮಿ ವಿವೇಕಾನಂದರು ಸನ್ಯಾಸತ್ವವನ್ನು ಸ್ವೀಕರಿಸಿ ಮಾಡಿದ ಅಮೋಘ ಕಾರ್ಯಗಳು ಎಲ್ಲರಿಗೂ ತಿಳಿದೇ ಇದೆ.
No comments:
Post a Comment