ಜಟಾಸುರ ವಧೆ
ಹಿಂದೆ ಪಾಂಡವರು ವನವಾಸದಲ್ಲಿ ಇದ್ದಾಗ ಜಟಾಸುರ ಎನ್ನುವ ರಾಕ್ಷಸ ಬ್ರಾಹ್ಮಣ ವೇಷದಲ್ಲಿ ಅವರ ನಡುವೆ ಬಂದು ಸೇರಿಕೊಳ್ಳುತ್ತಾನೆ.ಅವನ ಮುಖ್ಯ ಉದ್ದೇಶ ದ್ರೌಪದಿಯನ್ನು ಅಪಹರಿಸುವುದು ಮತ್ತು ಪಾಂಡವರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವುದು.ಆದರೆ ಭೀಮನು ತನ್ನ ಸಹೋದರರನ್ನು ಹದ್ದಿನ ಕಣ್ಣಿನಿಂದ ಕಾಪಾಡುತ್ತಿದ್ದನು.ಹೀಗಿರಲು ಒಂದು ದಿನಾ ಭೀಮನು ಯಾವುದೋ ಕೆಲಸದ ಮೇಲೆ ಹೊರಹೋಗಿದ್ದಾಗ ಜಟಾಸುರನು ಪಾಂಡವರಾದ ಯುಧಿಷ್ಠಿರ,ನಕುಲ ಮತ್ತು ಸಹದೇವ ಇವರನ್ನು ಒತ್ತೆಯಾಳಾಗಿ ವಶಪಡಿಸಿಕೊಂಡು ,ದ್ರೌಪದಿ ಯನ್ನು ತನ್ನ ಜೊತೆ ಬರುವಂತೆ ವಶಪಡಿಸಿಕೊಂಡು ಅಲ್ಲಿಂದ ತೆರಳುತ್ತಾನೆ.ಆದರೆ ಹಾಗೆ ಹೋಗುವಾಗ ಯುಧಿಷ್ಠಿರ ಅವನಿಗೆ ಧರ್ಮಸೂಕ್ಷ್ಮ ಮಾತುಗಳನ್ನು ಆಡುತ್ತ ಆತನ ವೇಗವನ್ನು ಕಡಿಮೆ ಮಾಡುತ್ತಾನೆ.ನಂತರ ಭೀಮನು ಇವರ ಸುಳಿವೇ ಇಲ್ಲದಿರುವುದನ್ನು ಕಂಡು ಜಟಾಸುರನ ಹಿಂದೆ ಬಿದ್ದು ಅವನನ್ನು ಹಿಡಿದು ನಂತರ ಅವನನ್ನು ಕೊಂದು ಉಳಿದ ಪಾಂಡವರು ಮತ್ತು ದ್ರೌಪದಿಯೊಡನೆ ಮನೆಗೆ ಮರಳುತ್ತಾನೆ.
No comments:
Post a Comment