Tuesday, July 30, 2024

ಕನ್ನಡ ಒಗಟು

ಇದು ಟಿ ವಿ ಯಲ್ಲಿ ಕೇಳಿದ್ದು 


ಎಲೆ ಹಾಕಿ ಊಟಕ್ಕೆ ಕರೀತಾರೆ 

ಎಲೆ ತೆಗೆದು ಊಟ ಮಾಡ್ತಾರೆ 

ಏನಿದು  ???


ಒಗಟು ಕೇಳಿದಾಗ ಮನೆಯೊಡತಿಯ ಸೊಕ್ಕು ಎಂದು ಎನಿಸಬಹುದು.


ಎಲೆ ಹಾಕಿ ಊಟಕ್ಕೆ ಕರೆದು ನಂತರ ಎಲೆ ತೆಗೆದು ಊಟ ಮಾಡಿ ಎಂದರೆ ???


ಇದೇನು ಹುಚ್ಚುತನ ??


ಆದರೆ ಉತ್ತರ ಕೇಳಿದರೆ ನಾವೂ ಹೌದು ಹೌದು ಎನ್ನುತ್ತೇವೆ  ,!!


ಇದು ಬಾಳೆ ಎಲೆ ಅಲ್ಲ, ಕರಿಬೇವಿನ ಎಲೆ   !!!!


ಅಡುಗೆ ಮಾಡುವಾಗ ಕರಿಬೇವಿನ ಎಲೆ ಹಾಕಿಯೇ ಅಡುಗೆ ಮಾಡುತ್ತಾರೆ.

ನಂತರ ಊಟ ಮಾಡುವಾಗ ಕರಿಬೇವಿನ ಎಲೆ ತೆಗೆದು ಪಕ್ಕಕ್ಕಿಟ್ಟು ಊಟ ಮಾಡುತ್ತಾರೆ.


ಇದನ್ನೇ ಒಗಟಿ ನಲ್ಲಿ ಹೇಳಿದ್ದು  !!!!

No comments:

Post a Comment