ಕಡಲೆಬೇಳೆ ಉಂಡೆ ಮಾಡುವ ಬಗೆ
ಈ ವಿಧಾನವನ್ನು ಟಿ.ವಿ.ಯಲ್ಲಿ ನೋಡಿದೆ. ಇಂಗ್ಲಿಷಿನಲ್ಲಿ ಬರೆಯಲು ಗೊತ್ತಾಗುತ್ತಿಲ್ಲ.
ಬೇಕಾದ ಪದಾರ್ಥಗಳು
ಹುರಿದಿಟ್ಟ ಕಡಲೆ ಬೇಳೆ - ೧ ಕಪ್
ಬೆಲ್ಲ- ೧ ಕಪ್
ನೀರು - ೧ ಕಪ್
ಕೊಬ್ಬರಿ ತುರಿ - ೧/೨ ಕಪ್
ಬಿಳಿ ಎಳ್ಳು - ಸ್ವಲ್ಪ
ಏಲಕ್ಕಿ ಪುಡಿ- ಸ್ವಲ್ಪ
ಮಾಡುವ ವಿಧಾನ
ಮೊದಲು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಬೆಲ್ಲ ಮತ್ತು ಅದು ಮುಳುಗುವಷ್ಟು ನೀರು ಹಾಕಿ ಪಾಕ ತಯಾರಿಸಿಟ್ಟುಕೊಳ್ಳಿ. ಮೊದಲೇ ಹುರಿದಿಟ್ಟ ಕಡಲೆ ಬೇಳೆಯನ್ನು ಮಿಕ್ಸಿ ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ.ನಂತರ ಈ ಮೊದಲೇ ತಯಾರಿಸಿಟ್ಟ ಬೆಲ್ಲದ ಪಾಕವನ್ನು ಹೀಗೆ ಪುಡಿ ಮಾಡಿದ ಕಡಲೆ ಬೇಳೆ ಗೆ ನಿಧಾನ ವಾಗಿ ಹಾಕಿ.ನಂತರ ಇದಕ್ಕೆ ಕೊಬ್ಬರಿ ತುರಿ, ಬಿಳಿ ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಬೆರಸಿ ಉಂಡೆ ಕಟ್ಟಿ.
very nice, hope to eat same when I visit next!
ReplyDelete