Friday, June 25, 2021

ಪ್ರಭಾವತಿ , ಇಂದ್ರನ ಪತ್ನಿ

ನಮಗೆಲ್ಲ ತಿಳಿದಿರುವಂತೆ ಶಚಿ ದೇವಿ ಇಂದ್ರನ ಪತ್ನಿ . ಆದರೆ ಒಂದು ಟಿ ವಿ ಕಾರ್ಯಕ್ರಮದಲ್ಲಿ ಪ್ರಭಾವತಿ ಎನ್ನುವವಳೂ ಇಂದ್ರನ ಮಡದಿ ಎಂದು ತಿಳಿಸಿದರು .


ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ , ನನಗೆ ತಿಳಿದ ವಿಷಯ ವನ್ನು ಹಂಚಿಕೊಳ್ಳಲು ಬಯಸುತ್ತೇನೆ.


ಪ್ರಭಾವತಿ ಭಾರದ್ವಾಜ ಮುನಿಗಳ ಮಗಳು . ಈಕೆ  ದೇವತೆಗಳ ರಾಜ  ಇಂದ್ರನಿಗೆ ಮ ನಸೋಲು ತ್ತಾಳೆ . ಅವನನ್ನೇ ಮದುವೆಯಾಗಲು ಹಠ ಹಿ ಡಿ ಯುತ್ತಾಳೆ . ಇಂದ್ರ ಅವಳನ್ನು ಪರೀಕ್ಷಿಸಲು ಬಯಸುತ್ತಾನೆ.

ಅದರಂತೆ ಅವನು ವೇಷ ಬದಲಿಸಿಕೊಂಡು ಅವಳ ಬಳಿಗೆ ಬರುತ್ತಾನೆ . ಅವನ ಬಳಿ ಕಬ್ಬಿಣದಿಂದ ಮಾಡಿದ ಎಲೈಚಿ ಹಣ್ಣುಗಳಿರು ತ್ತವೆ .


ಆತ ಪ್ರಭಾವತಿ ಯ ಬಳಿ ಬಂದು ಅವುಗಳನ್ನು ಬೇಯಿಸಿ ಕೊಡಲು ತಿಳಿಸುತ್ತಾನೆ . ಕಪಟವರಿಯದ ಪ್ರಭಾವತಿ ಅದನ್ನು ಬೇಯಿಸಿ ಕೊಡಲು ಒಪ್ಪುತ್ತಾಳೆ .


ಆದರೆ ಎಷ್ಟು ಹೊತ್ತು ಬೇಯಿಸಿದರೂ ಹಣ್ಣು ಗಳು ಬೇಯು ತ್ತನೆ ಇಲ್ಲ . ತಂ ದ ಉರುವಲು ಎಲ್ಲ ಖಾಲಿಯಾಯಿತು . ಆದರೆ ಹಣ್ಣು ಗಳು ಹಾ ಗೇ ಇವೆ.


ತನಗೆ ಇದೊಂದು ಪರೀಕ್ಷೆ ಎಂದು ತಿಳಿದ ಪ್ರಭಾವತಿ ತನ್ನ ಕಾಲನ್ನೇ ಕತ್ತರಿಸಿ ಅದನ್ನು ಕಟ್ಟಿಗೆಯ ಮಧ್ಯ ಇಟ್ಟು ಉರುವಲಾಗಿ  ಬಳಸಲು ನಿರ್ಧರಿಸುತ್ತಾಳೆ .


ಆಗ ಇಂದ್ರ ತನ್ನ ನೈಜ ರೂಪ ಪ್ರದರ್ಶಿಸುತ್ತಾ ನೆ ಮತ್ತು ಪ್ರಭಾವತಿ ಯನ್ನು ಮದುವೆಯಾಗುತ್ತಾನೆ .

No comments:

Post a Comment