Wednesday, May 22, 2024

Fire cracker flower, ಕನಕಾಂಬರ ಹೂವು

 ನಮ್ಮ ಕಡೆ ಕನಕಾಂಬರ ಹೂವಿಗೆ ಅಬ್ಬಲ್ಲಿಗೆ ಹೂವು ಎಂದು ಕರೆಯುತ್ತಾರೆ.


ಇವತ್ತಷ್ಟೇ ಈ ಹೂವಿಗೆ fire cracker flower ಎಂದು ಕರೆಯುತ್ತಾರೆಂದು ತಿಳಿಯಿತು.


ಈ ಹೂವಿಗೂ ಪಟಾಕಿಗೂ ಏನೂ ಸಂಬಂಧವಿಲ್ಲ !!!


ಆದರೆ ಇದರ ಬೀಜ ಪ್ರಸಾರ ಕ್ರಿಯೆ ಯಿಂದ ಈ ಹೆಸರು.


ಅಬ್ಬಲ್ಲಿಗೆ ಹೂವು ಬೆಳೆಯುವುದು ಒಂದು ರೀತಿಯ ಸಿಲಿಂಡರ್ ಮಾದರಿಯಲ್ಲಿ.


ಮೆಟ್ಟಲುಗಳಂತೆ ಇರುವ ರಚನೆಯಲ್ಲಿ ಮೇಲೆ ಹೂವುಗಳಿದ್ದರೆ ಕೆಳಗೆ ಬೀಜ ಗಳಿರುತ್ತವೆ.


ಈ ಬೀಜ ಪ್ರಸಾರ ಕ್ರಿಯೆಯೇ ರೋಚಕ.


ಚೆನ್ನಾಗಿ ಬಿಸಿಲಿಗೆ ಒಣಗಿದ ಬೀಜಗಳು ಪಟಾಕಿ ಸಿಡಿಯುವಂತೆ ತಮ್ಮ ಕೋಶದಿಂದ ಸಿಡಿಯುತ್ತವೆ !!!!


ಆ ಹೊತ್ತಲ್ಲಿ ನಾವೇನಾದರೂ ಗಿಡದ ಬಳಿಯಲ್ಲಿದ್ದರೆ ಸಿಡಿದ ಬೀಜಗಳಿಂದ ನಮ್ಮ ದೇಹದ ಮೇಲೆ ಬೊಬ್ಬೆ ಗ್ಯಾರಂಟಿ  !!!


ಆದರೂ ಇಷ್ಟರವರೆಗೆ ಎಲ್ಲೂ ಹೀಗೆ ಆಗಿಲ್ಲ.


ಏಕೆಂದರೆ ಬೀಜ ಪ್ರಸಾರ ಕ್ರಿಯೆ ನಡೆಯುವುದು ಬಿರು ಬಿಸಿಲ ಬೇಸಗೆಯ ಮಧ್ಯಾಹ್ನ ದಲ್ಲಿ   !!!!

No comments:

Post a Comment