Wednesday, February 26, 2025

ಶಿವನೇಕೆ ಮೈ ಮೇಲೆ ಭಸ್ಮ ಬಳಿದು ಕೊಂಡಿದ್ದಾನೆ ?

 ಇವತ್ತು ಮಹಾ ಶಿವರಾತ್ರಿ.  ಅದರ ಪ್ರಯುಕ್ತ ನನ್ನ ಅಂಕಣ.


ಬಹಳ ಹಿಂದೆ ಧದೀಚಿ  ಎಂಬ ಮುನಿ ದೇವೆತೆಗಳ ಪ್ರೀತ್ಯರ್ಥ ಒಂದು ಯಜ್ಞ ಮಾಡಲು ಆರಂಭಿಸಿದ.


ಆದರೆ ಶಕ್ತಿಶಾಲಿಯಾದ ಆ ಯಜ್ಞ ಬ್ರಹ್ಮಾಂಡ ವನ್ನೇ ಅಲುಗಾಡಿಸಲು ಆರಂಭಿಸಿತು.


ಇದರಿಂದ ದೇವತೆಗಳು ಭಯಭೀತಾರಾಗಿ ಆ ಯಜ್ಞವನ್ನು ಹಾಳುಗೆಡುವ ಲು ನೋಡಿದರು.


ಆದರೆ ಅವರಿಗೆ ಅದರ ಹತ್ತಿರ ಸುಳಿಯಲೂ ಆಗಲಿಲ್ಲ.


ಇದನ್ನೆಲ್ಲ ನೋಡುತ್ತಿದ್ದ ಶಿವ ಭೈರವನ ರೂಪ ತಾಳಿ ಯಜ್ಞದ ಸುತ್ತಾ ನರ್ತಿಸಲು ಶುರು ಮಾಡಿದ.


ಕೆಲವೇ ಕ್ಷಣಗಳಲ್ಲಿ ಯಜ್ಞವು ಬೂದಿಯಿಂದ ಮುಚ್ಚಿ ಹೋಯಿತು.


ಹೀಗೆ ಮಾಡಲು ಕಾರಣವೇನೆಂದು ದೇವೆತೆಗಳು ಕೇಳಿದಾಗ ಶಿವ ಹೇಳಿದ, ಯಜ್ಞದ ಉದ್ದೇಶ ಒಳ್ಳೆಯದೇ 

ಆದರೆ ಅದು ಅಹಂಕಾರದ ಪ್ರತೀಕವಾಗುತ್ತಾ ಸಾಗಿತು.


ಇದರ ದ್ಯೋತಕವಾಗಿ ಅಂದರೆ ಅಹಂಕಾರದ ನಾಶ ಮತ್ತು ಆಧ್ಯಾತ್ಮಿಕ ಪ್ರಗತಿಯ ಸೂಚಕವಾಗಿ ಶಿವನು ಆ ಯಜ್ಞದ ಬೂದಿಯನ್ನು ಮೈಗೆ ಬಳಿದುಕೊಂಡ.


ಇದು ಕೆಟ್ಟದ್ದರ ನಾಶ ದ ಸಂಕೇತವಾಗಿದೆ.

No comments:

Post a Comment