Wednesday, May 28, 2025

ಹುಳಿ ಮಾವಿನ ಹಣ್ಣಿನ ಖಾರ ಜ್ಯೂಸು

 ಈಗ ಮಾವಿನ ಹಣ್ಣಿನ ಸೀಸನ್.

ಈಗ ನಾನು ಹೇಳುತ್ತಿರವ ವಿಧಾನ ಹುಳಿ ಮಾವಿನ ಹಣ್ಣಿಗೆ ಸಂಬಂಧಿಸಿದ್ದು.

ನಮ್ಮ ಕಡೆ ಕಾಟು ಮಾವಿನ ಹಣ್ಣು ಅಂತ ಸಿಗ್ತದೆ.  ತುಂಬಾ ಹುಳಿ. ಹಾಗೆ ಸಿಪ್ಪೆ ತೆಗೆದು ತಿನ್ನಲು ಸಾಧ್ಯವೇ ಇಲ್ಲ.

ಅಂಥ ಮಾವಿನ ಹಣ್ಣು ಸಿಕ್ಕಿದಾಗ, ಒಟ್ಟು ಮೂರು ನಾಲ್ಕು ಸಿಕ್ಕಿದಾಗ ಈಥರ ಖಾರ ಖಾರ ಜ್ಯೂಸು ಮಾಡಬಹುದು.


ಬೇಕಾಗುವ ಸಾಮಗ್ರಿಗಳು 

ಕಾಟು ಮಾವಿನ ಹಣ್ಣು                   3 ರಿಂದ 4

ಉಪ್ಪು  ರುಚಿಗೆ 

ಬೆಲ್ಲ ರುಚಿಗೆ 

ಹಸಿಮೆಣಸಿನಕಾಯಿ ಖಾರಕ್ಕೆ ತಕ್ಕಂತೆ 


ಮಾಡುವ ವಿಧಾನ 

ಮೊದಲೇ ಹೇಳಿದಂತೆ ಈ ಜ್ಯೂಸು ಹುಳಿ ಮಾವಿನ ಹಣ್ಣಿನ ಸಲುವಾಗಿ ಮಾಡುದು.

ಹೀಗಾಗಿ ಸ್ವಲ್ಪ ಬೆಲ್ಲ ಬೇಕೇ ಬೇಕು.

ಇಲ್ಲದಿದ್ದರೆ ಹುಳಿಯಲ್ಲಿ ತಿನ್ನುವುದು ಸಾಧ್ಯವಿಲ್ಲ.

ಚೂರು ಬೆಲ್ಲ ಹಾಕಲೇಬೇಕು.



ಮೊದಲಿಗೆ ಮಾವಿನಹಣ್ಣಿನ ತಿರುಳನ್ನು ತೆಗೆದು ಇಟ್ಟುಕೊಳ್ಳ ಬೇಕು.

ಇದಕ್ಕೆ ಸ್ವಲ್ಪ ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು ಸೇರಿಸಬೇಕು 

ನಂತರ ಖಾರಕ್ಕೆ ತಕ್ಕಂತೆ ಹಸಿ ಮೆಣಸಿನಕಾಯಿ ಜ್ಯೂಸ್ ಅಲ್ಲಿ ನುರ್ಪಬೇಕು.

ನೀರು ಸೇರಿಸುವ ಅಗತ್ಯವಿಲ್ಲ.



ಹೊರಗೆ ಮಳೆ ಬರುತ್ತಿವಾಗ ಈ ಖಾರ ಜ್ಯೂಸು ನಮ್ಮ ನಾಲಿಗೆಯನ್ನು ಚುರುಗುಟ್ಟಿ ಸುವುದು ಗ್ಯಾರೆಂಟಿ !!!

No comments:

Post a Comment