ಗಂಗೆ ಜಾಹ್ನವಿ ಆದ ಬಗೆ
ಭಗೀರಥನು ಗಂಗೆಯನ್ನು ಸ್ವರ್ಗದಿಂದ ಕೆಳಗೆ ತಂದು ಆ ನೀರನ್ನು ಪಾತಾಳದಲ್ಲಿರುವ ತನ್ನ ಪೂರ್ವಜರ ದೇಹದ ಭಸ್ಮದ ಮೇಲೆ ಹರಿಸಿ ಅವರಿಗೆ ಮುಕ್ತಿ ಕರುಣಿಸಲು ಗಂಗೆಯನ್ನು ಕುರಿತು ತಪಸ್ಸು ಮಾಡುತ್ತಾನೆ.ಗಂಗೆಯು ಪ್ರತ್ಯಕ್ಷಳಾಗಿ ಭಗೀರಥನ ಬೇಡಿಕೆಗೆ ಅಸ್ತು ಅಂದಳಾದರೂ ಸ್ವರ್ಗದಿಂದ ಧರೆಗಿಳಿಯುವಾಗ ತನ್ನ ಪ್ರವಾಹವನ್ನು ತಡೆಯುವುದು ಶಿವನಿಗೆ ಮಾತ್ರ ಸಾಧ್ಯ ಎಂದು ಅವನನ್ನು ಕುರಿತು ತಪಸ್ಸು ಮಾಡಲು ತಿಳಿಸುತ್ತಾಳೆ.ಅಂತೆಯೇ ಭಗೀರಥನು ಶಿವನ್ನು ಕುರಿತು ತಪಸ್ಸು ಮಾಡಿ ಅವನನ್ನು ಪ್ರಸನ್ನ ಗೊಳಿಸುತ್ತಾನೆ.
ಶಿವನು ಪ್ರತ್ಯಕ್ಷನಾದಾಗ ಅವನಲ್ಲಿ ಗಂಗೆಯನ್ನು ತನ್ನ ಜಟೆಯಲ್ಲಿ ಹಿಡಿದುಕೊಳ್ಳುವಂತೆ ಬಿನ್ನವಿಸುತ್ತಾನೆ.ಅಂತೆಯೇ ಶಿವನು ಒಪ್ಪಿದ.ಹೀಗಾಗಿ ಅವನಿಗೆ ಗಂಗಾಧರ ಎನ್ನುವ ಹೆಸರು ಬಂತು.ಗಂಗೆ ಅಂತೆಯೇ ಶಿವನ ಜಟೆಯಿಂದ.ಕೆಳಗೆ ಇಳಿದು ಬರುತ್ತಾಳೆ.ಭೂಮಿಗೆ ಬರುವಾಗ ಆಕೆ ಜಹ್ನು ಎಂಬ ಮುನಿಯ ಆಶ್ರಮದಿಂದ ಬರಬೇಕಾಗುತ್ತದೆ.ಆದರೆ ಆಕೆಯ ಪ್ರವಾಹದಿಂದ ಮುನಿಯ ಆಶ್ರಮ ಕೊಚ್ಚಿ ಹೋಗುತ್ತದೆ.
ಇದರಿಂದ ಕೋಪಗೊಂಡ ಮುನಿಯು ಆ ಗಂಗೆಯನ್ನೇ ಕುಡಿದು ಬಿಡುತ್ತಾನೆ.ಇತ್ತ ಭಗೀರಥನು ಪಾತಾಳದಲ್ಲಿ ಇನ್ನೂ ಗಂಗೆಯು ಬರದೆ ಇರುವುದನ್ನು ಕಂಡು ಆಶ್ರಮದ ಬಳಿ ಬರುತ್ತಾನೆ.ಅಲ್ಲಿ ನಡೆದ್ದನ್ನನ್ನು ಊಹಿಸಿದ ಭಗೀರಥ ನಂತರ ಜಹ್ನು ಮುನಿಯನ್ನು ಸ್ತುತಿಸುತ್ತಾನೆ.
ಇದರಿಂದ ಪ್ರಸನ್ನಗೊಂಡ ಮುನಿ ಗಂಗೆಯನ್ನು ತನ್ನ ಕಿವಿಯಿಂದ ಹೊರಗೆ ಬಿಡಲು ಒಪ್ಪಿಕೊಳ್ಳುತ್ತಾನೆ.ಹೀಗೆ ಗಂಗೆ ಜಹ್ನು ಮುನಿಯ ಕಿವಿಯಿಂದ ಹೊರಬಂದು ಜಾಹ್ನವಿ ಎಂಬ ಹೆಸರು ಪಡೆಯುತ್ತಾಳೆ.ನಂತರ ಆಕೆ ಪಾತಾಳಕ್ಕೆ ಹರಿದು ಭಗೀರಥನ ಪೂರ್ವಜರಿಗೆ ಮುಕ್ತಿ ಕರುಣಿಸುತ್ತಾಳೆ.
ಹೀಗೆ ಗಂಗೆ ದೇವಲೋಕ(ಹಿಮಾಲಯ) ದಿಂದ ಕೆಳಗೆ ಇಳಿದು ಭೂಲೋಕ(ಭಾರತ ದೇಶ) ವನ್ನು ಪ್ರವೇಶಿಸಿ ನಂತರ ಪಾತಾಳ ಲೋಕ(ಬಂಗಾಳ ಕೊಲ್ಲಿ) ಯನ್ನು ಪ್ರವೇಶಿಸುತ್ತಾಳೆ.