Monday, December 30, 2024

ಜುಮಾದಿಯ ಜನನ

 ತುಳುನಾಡು ದೈವಗಳ ಆರಾಧನೆ ಗೆ ಪ್ರಸಿದ್ಧ.


ನಮ್ಮ ಕುಟುಂಬದ ಹಿರಿಯರ ಮನೆಯಲ್ಲಿ ನಾವು ಪಂಜುರ್ಲಿ ಮತ್ತು ಬೈಕಲ್ದಿ ಎಂಬ ದೈವಗಳನ್ನು ಪೂಜಿಸುತ್ತೇವೆ.


ಆದರೆ ನಾನು ಇಲ್ಲಿ ಹೇಳಹೊರಟಿರುವುದು ಬಿಲ್ಲವ ಸಮುದಾಯದವರು ಪೂಜಿಸುವ ಜುಮಾದಿ ಎಂಬ ದೈವದ ಕುರಿತು.


ಧೂಮಾಸುರ ಎಂಬ ರಾಕ್ಷಸ ಲೋಕ ಕಂಟಕ ನಾಗಿದ್ದ . ಆತ ಒಬ್ಬ ನರ ಭಕ್ಷಕನಾಗಿದ್ದ.


ಆತನಿಗೆ ಪುರುಷನೂ ಮತ್ತು ಮಹಿಳೆಯೂ ಏಕಕಾಲದಲ್ಲಿ ಆಗಿರುವ ವ್ಯಕ್ತಿ ಯಿಂದ ಮಾತ್ರವೇ ಸಾವು ಎಂಬ ವರವಿತ್ತು 


ಭಕ್ತರೆಲ್ಲ ರಾಕ್ಷಸನಿಂದ ಪಾರು ಮಾಡುವಂತೆ ಶಿವ ಪಾರ್ವತಿ ಯರ ಮೊರೆ ಹೋಗುತ್ತಾರೆ 


ಅದರಂತೆ ಅವರು ಭೂಲೋಕಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯ ಪಾರ್ವತಿಗೆ ಸಿಕ್ಕಾಪಟ್ಟೆ ಹಸಿವಾಯಿತು 


ಪಾರ್ವತಿಯ ಹಸಿವನ್ನು ತಣಿಸುವ ಶಿವನ ಪ್ರಯತ್ನಗಳೆಲ್ಲ ವಿಫಲವಾದವು 


ಸೋತು ಕೈ ಚೆಲ್ಲಿದ ಶಿವ ತನ್ನನ್ನೇ ತಿನ್ನುವಂತೆ ಪಾರ್ವತಿಗೆ ತಿಳಿಸುತ್ತಾನೆ


ಅದರಂತೆ ಪಾರ್ವತಿ ಶಿವನನ್ನು ನುಂಗಲು ನೋಡುತ್ತಾಳೆ

ಆದರೆ ಶಿವ ಅವಳ ಗಂಟಲಿನಿಂದ ಆಚೆ ಬರುವುದಿಲ್ಲ..


ಈ ಹೊತ್ತಿನಲ್ಲಿ ಶಿವ ಮತ್ತು ಪಾರ್ವತಿ ಯರು ಒಂದೇ ರೂಪವನ್ನು ಧರಿಸುತ್ತಾರೆ. ಆ ರೂಪದಲ್ಲಿ ಮುಖವು ಗಂಡಸಿನದ್ದು ಮತ್ತು ದೇಹವು ಹೆಂಗಸಿನದ್ದು.


ಅದುವೇ ಜುಮಾದಿ.


ಈ ರೂಪದಲ್ಲಿ ಧೂಮಾಸುರ ನ ಸಂಹಾರವಾಗಿ ನಂತರ ಜುಮಾದಿ ಶಿವಗಣ ಗಳಲ್ಲಿ ಒಂದಾಗುತ್ತದೆ.

No comments:

Post a Comment