ಇವತ್ತು ಕನ್ನಡ ರಾಜ್ಯೋತ್ಸವದ ಶುಭ ದಿನ. ನಾನೂ ಕನ್ನಡಿಗಳೇ. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತದ್ದು.
ನಾನು ಜನರಲ್ ನಾಲೆಜ್ ಮೇಲೆ ಬ್ಲಾಗ್ ಬರೆಯುವ ಕಾರಣ ಎಲ್ಲದಕ್ಕೂ ಕನ್ನಡ ಪದಗಳು ಸಿಗುವುದಿಲ್ಲ.
ಅದಕ್ಕಾಗಿ ಇಂಗ್ಲಿಷ್ ನೆಚ್ಚಿಕೊಂಡಿದ್ದೇನೆ.
ಪ್ರಪಂಚದ ಎಲ್ಲಾ ಜನರೂ ನನ್ನ ಬ್ಲಾಗ್ ಓದಬೇಕು ಎಂಬ ಸಣ್ಣ ಸ್ವಾರ್ಥ !!!!
-------------------------------------------–------
ಇದು ಖ್ಯಾತ ಹನಿ ಕವಿ ದುಂಡಿ ರಾಜ್ ಹೇಳಿದ್ದು
ಮೊಸರು ಬೆಣ್ಣೆ ತುಪ್ಪ
ಜಾಸ್ತಿ ತಿನ್ನಬಾರದಪ್ಪ
ಅಂತ ಹೇಳಿದ ಮೂರ್ತಿ
ತಾನೇ ತಿಂದ ಪೂರ್ತಿ !!!!
-------------------------------------
ಬೇಗ ತೀರಿಸುತ್ತೇನೆ ಎನ್ನುತ್ತಾರೆ
ಸಾಲ ಸಿಗುವವರೆಗೆ
ಸಾಲ ಸಿಕ್ಕ ಮೇಲೆ ಆಗುತ್ತಾರೆ
ವ್ಯಾಪ್ತಿ ಪ್ರದೇಶದ ಹೊರಗೆ !!!!
---------------------------
ಹಾಸಿಗೆ ಇದ್ದಷ್ಟೇ ಕಾಲು ಚಾಚಿ
ಕರೆನ್ಸಿ ಇದ್ದಷ್ಟೇ call ಉ ಮಾಡಿ
ತೀರಿಸಲಾಗುವಷ್ಟೇ ಸಾಲ ಮಾಡಿ