Thursday, December 16, 2010

ಅಜಮಿಳನ ಕಥೆ

                                   ಅಜಮಿಳನ ಕಥೆ
ಅಜಮಿಳ ಎಂಬುವವನು ತನ್ನ ಪೋಷಕರಿಗೆ ಒಬ್ಬನೇ ಮಗ.ಆತ ಬಾಲ್ಯದಿಂದಲೇ ವೈದಿಕ ವೃತ್ತಿ ಯ ಕಡೆ ಆಕರ್ಷಿತನಾಗಿದ್ದ. ಆತನಿಗೆ ಮದುವೆಯು ಆಗಿತ್ತು.ಓರ್ವ ಬ್ರಾಹ್ಮಣನ ಎಲ್ಲ ಕೆಲಸಗಳನ್ನು ಆತ ಚಾಚು ತಪ್ಪದೆ ಮಾಡುತ್ತಿದ್ದ.
ಹೀಗಿರಲು ಒಂದು ದಿನ ಆತ ಯಾಗಕ್ಕೆ ಸೌದೆ ತರಲು ಕಾಡಿಗೆ ಹೋಗಿದ್ದಾಗ ಅಲ್ಲಿ ಓರ್ವ ಆಂದರ ತರುಣಿಯನ್ನು ಕಂಡು ಆಕೆಯನ್ನು ಮನೆಗೆ ಕರೆತರುತ್ತಾನೆ.ಮತ್ತು ಆಕೆಯ ಮೋಹ ಪಾಶದಲ್ಲಿ ಎಲ್ಲರನ್ನು ಮರೆಯುತ್ತಾನೆ.ತನ್ನ ವೈದಿಕ ಧರ್ಮವನ್ನು ಸಹ. ಆತನಿಗೆ ಆ ತರುಣಿಯಲ್ಲಿ ತುಂಬಾ ಮಕ್ಕಳಾಗುತ್ತಾರೆ.ಅಜಮಿಳ ಓರ್ವ ಕಳ್ಳನೂ,ಸುಳ್ಳನೂ ಆಗಿ ಬದಲಾಗುತ್ತಾನೆ.
ಹೀಗಿರಲು ಅಜಮಿಳ ನಿಗೆ ವೃದ್ಧಾಪ್ಯ ಬರುತ್ತದೆ.ಆತ ಈಗ ಮನೆಯಲ್ಲೇ ಇರಲಾರಂಭಿಸಿದ್ದಾನೆ.ಆತನ ಕೊನೆ ಮಗ ನಾರಾಯಣ ಎಂದರೆ ಅವನಿಗೆ ತುಂಬಾ ಪ್ರೀತಿ.ಒಮ್ಮೆ ಮರಣ ಶಯ್ಯೆಯಲ್ಲಿ ಇದ್ದಾಗ ತುಂಬಾ ನೀರದಿಕೆಯಾಗಿ ಆತ ನೀರು ತರಲು ತನ್ನ ಮಗನಾದ ನಾರಾಯಣ ನನ್ನು ಕರೆಯುತ್ತಿರುವಾಗಲೇ ಆತನ ಪ್ರಾಣ ಹೋಗುತ್ತದೆ.
ಆಗ ಯಮದೂತರು ಆತನ ಪ್ರಾಣ ಕೊಂಡೊಯ್ಯಲು ಬರುತ್ತಾರೆ ಆತನ ಕುಕೃತ್ಯಗಳಿಗೆ ಶಿಕ್ಷೆ ನೀಡಲು.ಆದರೆ ಅಜಾಮಿಳನು ಸಾಯುವ ಮೊದಲು ನಾರಾಯಣ ನ ನಾಮ ಸ್ಮರಣೆ ಮಾಡಿದ್ದರಿಂದ ಆತನಿಗೆ ಮೋಕ್ಷ ಕರುಣಿಸಲು ವಿಷ್ನುದೂತರೂ ಬರುತ್ತಾರೆ.ಆಗ ಯಮದೂತರಿಗೂ,ವಿಷ್ನುದೂತರಿಗೂ ಅಜಮಿಳ ಯಾರ ಜೊತೆ ಹೋಗಬೇಕೆಂದು ಜಗಳ ಪ್ರಾರಂಭವಾಗುತ್ತದೆ.ಆದರೆ ಎಷ್ಟೇ ಪಾಪ ಮಾಡಿದ್ದರೂ, ಮರಣ ಶಯ್ಯೆಯಲ್ಲಿ ನಾರಾಯಣ ನ ನಾಮ ಸ್ಮರಣೆ ಮಾಡಿದ್ದರಿಂದ ಅಜಮಿಳನಿಗೆ ತನ್ನ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

3 comments:

  1. ನಾನು ನನ್ನ ಮಗನಿಗೆ ನಾರಾಯಾಣ ಅಂತ ಹೆಸರಿಡಬೇಕಿತ್ತು ಎಲ್ಲಾ ಬಿಟ್ಟು ನನ್ನಪ್ಪನ ಹೆಸರು ನಾರಾಯಣ! ಛೇ ಹೇಳಿ ಪ್ರಯೋಜನವಿಲ್ಲ ..

    ReplyDelete
  2. ಭಕ್ತ ಕನಕದಾಸ ಸಿನಿಮಾದಲ್ಲಿನ ಹಾಡು ಬಾಗಿಲನು ತೆರೆದು ಕೇಳಿದ ನಂತರ ಅಜಮಿಲನ ಬಗ್ಗೆ ತಿಳಿಯಿತು. ಕಥೆ ಚೆನ್ನಾಗಿದೆ

    ReplyDelete