ನರಾಂತಕ-ದೇವಾನ್ತಕ ವಧೆ
ನರಾಂತಕ ಮತ್ತು ದೇವಾನ್ತಕ ಎಂಬಿಬ್ಬರು ರಾಕ್ಷಸರು ಮುನಿ ರುದ್ರಕೇತು ಎಂಬ ಮುನಿಯ ಮಕ್ಕಳು.ಮುನಿಯ ಮಕ್ಕಳಾಗಿದ್ದರೂ, ಅವರು ಪರಶಿವನ್ನು ಕುರಿತು ತಪಸ್ಸು ಮಾಡಿ ಅನೇಕ ವರಗಳನ್ನು ಪಡೆದು ಬಲಶಾಲಿ ಮತ್ತು ಕ್ರೂರಿ ಗಳಾಗಿ ಬದಲಾಗುತ್ತಾರೆ.ಅವರು ಸ್ವರ್ಗ ದ ಮೇಲೆ ಆಕ್ರಮಣ ಮಾಡುತ್ತಾರೆ.
ಆಗ ದೇವತೆಗಳ ಮೊರೆ ಕೇಳಿ ಗಣೇಶನು ಅವರ ಸಹಾಯಕ್ಕೆ ಬರಲು ನಿಶ್ಚಯಿಸಿ ಮಹೋತ್ಕಟ ಎಂಬ ಅವತಾರವನ್ನು ಎತ್ತುತ್ತಾನೆ.ಅವನು ತನ್ನ ದಂತಗಳಿಂದ ಅಸುರರಿಬ್ಬರನ್ನು ಕೊಲ್ಲುತ್ತಾನೆ ಮತ್ತು ಲೋಕವನ್ನು ರಾಕ್ಷಸರಿಂದ ರಕ್ಷಿಸುತ್ತಾನೆ.ಹೀಗೆಂದು ಗಣೇಶ ಪುರಾಣ ದಲ್ಲಿ ಬರುವ ಕಥೆ ತಿಳಿಸುತ್ತದೆ.
No comments:
Post a Comment