ಚಂದ್ರನು ಸುಧಾಕರನಾದದ್ದು
ಹಿಂದೆ ಚಂದ್ರನ ಜನನ ಸಮಯದಲ್ಲಿ ಆತನ ತೇಜಸ್ಸನ್ನು ತಾಳಲಾರದೆ ಆತನ ತಾಯಿ ತನ್ನ ಗರ್ಭಸ್ಥ ಪಿಂಡವನ್ನು ಮೊದಲು ಗಂಗೆಯಲ್ಲಿ ವಿಸರ್ಜಿಸಿದಳು.ಆದರೆ ಗಂಗೆ ಅದರ ತಾಪವನ್ನು ಸಹಿಸಲಾಗದೆ ವಿಷ್ಣುವಿನ ಬಳಿ ಕಾಪಾಡಲು ಮೊರೆಯಿತ್ತಾಗ ಆತ ಅದನ್ನು ಪರ್ವತ ದ ಬಳಿ ಕೊಂಡೊಯ್ಯುತ್ತಾನೆ.ಹೀಗೆ ಕೊಂಡೊಯ್ಯುತ್ತಿರುವಾಗ ಆ ಪಿಂಡದ ತೇಜಸ್ಸಿನ ಸ್ವಲ್ಪ ಭಾಗ ನೆಲಕ್ಕೆ ಬೀಳುತ್ತದೆ.ಆಗ ಅಲ್ಲಿ ವನಸ್ಪತಿ (ಔಷಧೀಯ ಸಸ್ಯಗಳು)ಹುಟ್ಟುತ್ತವೆ.ಇದರಿಂದ ಚಂದ್ರನಿಗೆ ಓಶಧೀಶ ಎನ್ನುವ ಹೆಸರು ಬಂದಿದೆ,
ನಂತರ ಚಂದ್ರನು ಹುಟ್ಟಿ ದೊಡ್ಡವನಾದ ಮೇಲೆ ಆತನನ್ನು ದೇವತೆಗಳು ತಮ್ಮ ಜೊತೆಗೆ ಕರೆದುಕೊಳ್ಳುತ್ತಾರೆ.ಆಗ ದೇವತೆಗಳ ಬಳಿ ಇರುವ ಅಮೃತ ಕ್ಕಾಗಿ ಸುರಾಸುರ ರ ನಡುವೆ ಯಾವಾಗಲು ಕದನ ಉಂಟಾಗುತ್ತಿರುತ್ತದೆ,ಇದರಿಂದಾಗಿ ದೇವತೆಗಳು ಚಂದ್ರನ ಬಳಿ ಅಮೃತ ವನ್ನು ಕೊಟ್ಟು ಜೋಪಾನವಾಗಿ ಇಡಲು ತಿಳಿಸುತ್ತಾರೆ.ಹೀಗಾಗಿ ಚಂದ್ರನಿಗೆ ಸುಧಾಕರ ಎಂಬ ಹೆಸರು ಬಂತು.
ಅಲ್ಲದೆ ಚಂದ್ರನು ಮೊಲದ ರೀತಿ ಮುಖವನ್ನು ಹೊಂದಿದ್ದಾನೆ.ಆದರಿಂದ ಆತನಿಗೆ ಶಶಾಂಕ ಎನ್ನುವ ಹೆಸರೂ ಬಂದಿದೆ.
No comments:
Post a Comment