ಕೇದಗೆ ಹೂವೇಕೆ ಶಿವಪೂಜೆಗೆ ವರ್ಜ್ಯ?
ಹಿಂದೆ ವಿಷ್ಣುವಿಗೂ ಮತ್ತು ಬ್ರಹ್ಮನಿಗೂ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂದು ವಾಗ್ವಾದ ಸುರುವಾಯಿತು.ಅದು ವಿಕೋಪಕ್ಕೆ ತಿರುಗಿ ಅವರು ಒಬ್ಬರ ಮೇಲೆ ಮತ್ತೊಬ್ಬರು ಯುದ್ಧ ಮಾಡಲು ಸುರು ಮಾಡಿದರು.ತ್ರಿಮೂರ್ತಿಗಳ ನಡುವೆಯೇ ಯುದ್ಧ ಎಂದಾದಾಗ ಲೋಕವೇ ತತ್ತರಿಸಿತು.ಬ್ರಹ್ಮ ಮತ್ತು ವಿಷ್ಣು ಪರಸ್ಪರರ ಮೇಲೆ ಆಯುಧಗಳನ್ನು ಪ್ರಯೋಗಿಸುತ್ತಿದ್ದರು.ಇದರಿಂದ ಮೂರೂ ಲೋಕಗಳೂ ಹಾನಿಗೀದಾದವು.
ಆಗ ದೇವತೆಗಳು ಎಲ್ಲ ಸೇರಿ ಶಿವನ ಮೊರೆ ಹೊಕ್ಕು ಪರಿಸ್ಥಿತಿಯನ್ನು ವಿವರಿಸಿದರು.ಆಗ ಶಿವನು ಲಿಂಗ ರೂಪವನ್ನು ಧರಿಸಿ ಜಗಳವಾಡುತ್ತಿದ್ದವರ ನಡುವೆ ಕಾಣಿಸಿಕೊಂಡ.ತಮ್ಮ ನಡುವೆ ಇದ್ದಕ್ಕಿಂದ್ದಂತೆ ಉದ್ಭವವಾದ ಲಿಂಗವನ್ನು ಕಂಡು ಅಚ್ಚರಿಗೊಳಗಾದ ಬ್ರಹ್ಮನು ಲಿಂಗದ ಮೇಲ್ಭಾಗವನ್ನೂ,ವಿಷ್ಣುವು ಲಿಂಗದ ಕೆಳಭಾಗವನ್ನೂ ಅನ್ವೇಷಿಸಲು ಹೊರಟರು.ಆದರೆ ಅದರ ಅಂತ್ಯವನ್ನೇ ಕಾಣಲಿಲ್ಲ.
ಆಗ ಮೇಲ್ಭಾಗದಲ್ಲಿದ್ದ ಬ್ರಹ್ಮನಿಗೆ ಒಂದು ಕೇದಗೆ ಹೂವು ಕೆಳಗೆ ಬೀಳುತ್ತಿರುವುದು ಕಂಡಿತು.ಆಗ ಬ್ರಹ್ಮನು ಆ ಕೇದಗೆ ಹೂವಿನ ಬಳಿ ತಾನು ಲಿಂಗದ ಅಂತ್ಯವನ್ನು ಕಂಡದ್ದಾಗಿ ತಿಳಿಸಬೇಕೆಂದು ಕೇಳಿಕೊಂಡ.ಅದಕ್ಕೆ ಕೇದಗೆ ಹೂವು ಸುಳ್ಳು ಹೇಳಲು ಒಪ್ಪಿತು.ಅಂತೆಯೇ ಕೇದಗೆ ಹೂವು ವಿಷ್ಣುವಿನ ಬಳಿ ಬ್ರಹ್ಮನು ಲಿಂಗದ ಅಂತ್ಯವನ್ನು ಕಂಡಿದ್ದಾಗಿ ತಿಳಿಸಿತು. ಆಗ ವಿಷ್ಣುವು ತನ್ನ ಸೋಲನ್ನು ಒಪ್ಪಿಕೊಂಡು ಬ್ರಹ್ಮನೇ ಶ್ರೇಷ್ಠ ಎಂದು ಹೇಳಿದ.
ಇದು ಶಿವನಿಗೆ ತಿಳಿಯಿತು.ಆತ ಕೇದಗೆ ಹೂವಿನ ಮೇಲೆ ಸಿಟ್ಟು ಬಂತು.ಸುಳ್ಳು ಹೇಳಿದ್ದಕ್ಕಾಗಿ ಆ ಹೂವಿಗೆ ಶಿಕ್ಷೆ ಕೊಡಲು ನಿರ್ಧರಿಸಿದ.ಶಿವನು ಕೇದಗೆ ಹೂವಿಗೆ "ಇನ್ನು ತನ್ನ ಪೂಜೆಗೆ ಯಾರೂ ಕೇದಗೆ ಹೂವನ್ನು ಯಾರೂ ಉಪಯೋಗಿಸಬಾರದು"ಎಂದು ಶಾಪವಿತ್ತ.ಅಂದಿನಿಂದ ಶಿವ ಪೂಜೆಗೆ ಯಾರೂ ಕೇದಗೆ ಹೂವು ಬಳಸುವುದಿಲ್ಲ.
No comments:
Post a Comment