ತುಳಸಿಯ ಹುಟ್ಟು
ತುಳಸಿಯು ಜಲಂಧರ ಎನ್ನುವ ರಾಕ್ಷಸನ ಹೆಂಡತಿ.ಆಕೆ ಮಹಾ ಪತಿವ್ರತೆ.ಆಕೆಯ ಪಾತಿವೃತ್ಯ್ಯದಿಂದ ಜಲಂಧರನು ಅಜೇಯನಾಗಿರುತ್ತಾನೆ.ಆದರೆ ಜಲಂಧರನು ಸಾಕ್ಷಾತ್ ಶಿವ ಮತ್ತು ಸಮುದ್ರದ ಸಂಯೋಗದಿಂದ ಹುಟ್ಟಿದವನು.ಆದರೆ ಆತ ಇದರ ಅರಿವಿಲ್ಲದೆ
ಪಾರ್ವತಿಯ ಬಳಿ ಮೋಹಗೊಳ್ಳುತ್ತಾನೆ ಮತ್ತು ಶಿವನ ಬಳಿ ಆಕೆಯನ್ನು ತನಗೆ ಒಪ್ಪಿಸುವಂತೆ ಹೇಳುತ್ತಾನೆ.
ಆದರೆ ಶಿವ ಇದಕ್ಕೆ ನಿರಾಕರಿಸಿದಾಗ ಸಿಟ್ಟಿಗೆದ್ದ ಜಲಂಧರ ಶಿವನ ಮೇಲೆ ಯುದ್ಧಕ್ಕೆ ನಿಲ್ಲುತ್ತಾನೆ.ತುಳಸಿಯ ಪಾತಿವ್ರತ್ಯದಿಂದ ಶಿವನಿಗೆ ಆತನನ್ನು ಗೆಲ್ಲಲು ಆಗುವುದಿಲ್ಲ.ಆಗ ವಿಷ್ಣುವು ಜಲಂಧರನ ವೇಷದಲ್ಲಿ ಬಂದು ತುಳಸಿಯ ಪಾತಿವ್ರತ್ಯ ವನ್ನು ಭಂಗ ಗೊಳಿಸುತ್ತಾನೆ.ಆಗ ಅತ್ತ ಶಿವ ಜಲಂಧರ ನನ್ನು ಕೊಲ್ಲುತ್ತಾನೆ.
ಇದನ್ನು ತಿಳಿದ ತುಳಸಿಗೆ ತನಗಾದ ಮೋಸದ ಅರಿವಾಗಿ ಆಕೆ ಸಿಟ್ಟಿಗೆದ್ದು ವಿಷ್ಣುವಿಗೆ ಶಾಪ ನೀಡಲು ಸಿದ್ಧಳಾಗುತ್ತಲೇ ವಿಷ್ಣುವು ಆಕೆಯನ್ನು ಸಮಾಧಾನಪಡಿಸಿ ಆಕೆಯ ಸಾವಿನ ನಂತರ ಆಕೆಯ ಗೋರಿಯ ಮೇಲೆ ಒಂದು ಗಿಡವು ಹುಟ್ಟುತ್ತದೆಯೆಂದೂ,ಮತ್ತು ಆ ಗಿಡದ ಎಲೆಗಳಿಂದ (ತುಳಸಿ ಎಲೆಗಳಿಂದ)ಮಾಡಿದ ಮಾಲೆಯು ತನಗೆ ಪ್ರಿಯವಾಗುವುದೆಂದು ವರ ನೀಡುತ್ತಾನೆ.
ಹೀಗಾಗಿ ವಿಷ್ಣುವಿಗೆ ತುಳಸಿ ಅರ್ಚನೆ ಮತ್ತು ತುಳಸಿ ಮಾಲೆ ತುಂಬಾ ಪ್ರಿಯವಾದದ್ದು.ತುಳಸಿ ಯ ವೃಂದಾವನ ಮನೆಯ ಮುಂದಿದ್ದಾರೆ ಶುಭ ಎನ್ನುವುದು ಹಿಂದೂಗಳ ನಂಬಿಕೆ.
ತುಂಬಾ ಮನೋಹರವಾಗಿದೆ
ReplyDelete