ಅಘಾಸುರ ವಧೆ
ಅಘಾಸುರ ಎನ್ನುವ ರಾಕ್ಷಸನು ಕಂಸನ ಸಹಚರ.ಕಂಸನಿಗೆ ಶ್ರೀ ಕೃಷ್ಣನೇ ತನ್ನ ಮೃತ್ಯು ಎಂದು ತಿಳಿದಾಗ ಆತ ಅಘಾಸುರನನ್ನು ಕರೆದು ಕೃಷ್ಣ ನನ್ನು ಕೊಲ್ಲುವಂತೆ ತಿಳಿಸಿದ.ಅಂತೆಯೇ ಅಘಾಸುರನು ಗೋಕುಲ ದಲ್ಲಿ ಹೆಬ್ಬಾವಿನ ರೂಪದಲ್ಲಿ ಬರುತ್ತಾನೆ.ಅಲ್ಲಿ ಗೋಪಾಲ ರು ಆಟವಾಡುತ್ತಿದ್ದ ಪ್ರದೇಶಕ್ಕೆ ಹೋಗಿ ಅಲ್ಲಿ ಬಾಯಿ ತೆರೆದು ಮಲಗುತ್ತಾನೆ.
ಇದನ್ನು ಅರಿಯದ ಗೋಪಾಲರು ಅದನ್ನು ಗುಹೆಯೆಂದು ಭಾವಿಸಿ ಅದರ ಒಳ ಹೋಗುತ್ತಾರೆ.ಕೂಡಲೇ ಅಘಾಸುರನು ಕೃಷ್ಣ ನು ಒಳಬಂದನೆಂದು ತಿಳಿದು ಬಾಯಿ ಮುಚ್ಚುತ್ತಾನೆ.ಆದರೆ ಕೃಷ್ಣ ಇನ್ನೂ ಹೊರಗೆ ಇರುತ್ತಾನೆ.ತನ್ನ ಸ್ನೇಹಿತರು ಗುಹೆಯ ಒಳಹೋದದ್ದನ್ನು ಆದರೆ ಅದರಿಂದ ಹೊರಬರದೆ ಇದ್ದದ್ದನ್ನು ಗಮನಿಸಿದ ಕೃಷ್ಣ ಕೇಡನ್ನು ಶಂಕಿಸುತ್ತಾನೆ.ತಾನೂ ಆ ಹೆಬ್ಬಾವಿನ ಬಳಿ ಬಂದು ನೋಡುತ್ತಿದ್ದಾಗ ಮತ್ತೆ ಅಘಾಸುರನು ಬಾಯಿ ತೆಗೆದು ಕೃಷ್ಣ ನನ್ನು ನುಂಗುತ್ತಾನೆ.
ತನ್ನ ಗೆಳೆಯರು ಹೆಬ್ಬಾವಿನ ಹೊಟ್ಟೆಯೊಳಗೆ ಅಚೇತನರಾಗಿ ಮಲಗಿರುವುದನ್ನು ಕಂಡ ಕೃಷ್ಣನಿಗೆ ಅಪಾಯದ ಅರಿವಾಗುತ್ತದೆ.ಕೂಡಲೇ ಆತ ದೊಡ್ಡದಾಗಿ ಬೆಳೆದು ಹೆಬ್ಬಾವಿನ ಹೊಟ್ಟೆಯನ್ನು ಸೀಳುತ್ತಾನೆ.ಮತ್ತು ತನ್ನ ಗೆಳೆಯರನ್ನು ಅಲ್ಲಿಂದ ಹೊರ ತರುತ್ತಾನೆ.ಹೀಗೆ ಕೃಷ್ಣ ಅಘಾಸುರ ನನ್ನು ವಧಿಸುತ್ತಾನೆ.
No comments:
Post a Comment